-
ಆದಿಕಾಂಡ 48:19, 20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
19 ಆದ್ರೆ ಅವನ ತಂದೆ ನಿರಾಕರಿಸ್ತಾ “ನನಗೆ ಗೊತ್ತು ಮಗ, ನನಗೆ ಗೊತ್ತು. ಅವನ ವಂಶಜರು ಕೂಡ ದೊಡ್ಡ ಜನಸಮೂಹ ಆಗ್ತಾರೆ. ಅವನು ಕೂಡ ಪ್ರಧಾನ ವ್ಯಕ್ತಿಯಾಗ್ತಾನೆ. ಆದ್ರೆ ಅವನ ತಮ್ಮ ಅವನಿಗಿಂತ ಹೆಚ್ಚು ಪ್ರಧಾನನಾಗ್ತಾನೆ.+ ಇವನ ವಂಶ ಎಷ್ಟು ದೊಡ್ಡದಾಗುತ್ತೆ ಅಂದ್ರೆ ಅವರು ಅನೇಕ ಜನಾಂಗಗಳಿಗೆ ಸಮಾನರಾಗಿ ಇರ್ತಾರೆ” ಅಂದ.+ 20 ಆ ದಿನ ಅವನು ಅವರನ್ನ ಇನ್ನೂ ಆಶೀರ್ವದಿಸ್ತಾ+
“ಇಸ್ರಾಯೇಲ್ಯರು ಬೇರೆಯವರನ್ನ ಆಶೀರ್ವದಿಸುವಾಗ,
‘ದೇವರು ಎಫ್ರಾಯೀಮ್ ಮತ್ತು ಮನಸ್ಸೆಗೆ ಆಶೀರ್ವಾದ ಮಾಡಿದ ಹಾಗೆ ನಿನ್ನನ್ನೂ ಆಶೀರ್ವದಿಸಲಿ’ ಅಂತ ಹೇಳಲಿ” ಅಂದ.
ಹೀಗೆ ಅವರಿಗೆ ಆಶೀರ್ವಾದ ಮಾಡುವಾಗ ಮನಸ್ಸೆಗೆ ಬದಲಾಗಿ ಎಫ್ರಾಯೀಮನಿಗೆ ಮೊದಲ ಸ್ಥಾನ ಕೊಟ್ಟ.
-