ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಸ್ವಾಗತ.
ಇದು ಯೆಹೋವನ ಸಾಕ್ಷಿಗಳು ಬೇರೆಬೇರೆ ಭಾಷೆಯಲ್ಲಿ ತಯಾರಿಸಿರುವ ಪ್ರಕಾಶನಗಳ ಸಂಶೋಧನಾ ಸಾಧನ.
ಪ್ರಕಾಶನಗಳನ್ನು ಡೌನ್‌ಲೋಡ್‌ ಮಾಡಲು ದಯವಿಟ್ಟು jw.orgಗೆ ಭೇಟಿ ಮಾಡಿ.
  • ಇಂದು

ಗುರುವಾರ, ಜುಲೈ 17

ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ. ಕಷ್ಟಕಾಲದಲ್ಲಿ ಅವನು ನಿಮ್ಮ ಸಹೋದರನಾಗ್ತಾನೆ.—ಜ್ಞಾನೋ. 17:17.

ಯೇಸುವಿನ ತಾಯಿ, ಮರಿಯಳಿಗೆ ಬಲ ಬೇಕಿತ್ತು. ಅವಳಿಗಿನ್ನೂ ಮದುವೆನೇ ಆಗಿರ್ಲಿಲ್ಲ, ಆದ್ರು ಅವಳು ಗರ್ಭಿಣಿ ಆಗ್ತಾಳೆ ಅಂತ ಸುದ್ದಿ ಸಿಕ್ಕಿದ್ದಾಗ ಅವಳಿಗೆ ಎಷ್ಟು ಗಾಬರಿಯಾಗಿರಬೇಕು ಅಲ್ವಾ? ಇದುವರೆಗೂ ಅವಳು ಯಾವ ಮಕ್ಕಳನ್ನೂ ಬೆಳೆಸಿರಲಿಲ್ಲ. ಅದ್ರಲ್ಲೂ ಮೆಸ್ಸೀಯನನ್ನ ಅವಳು ಬೆಳೆಸಬೇಕಾಗಿತ್ತು. ಅವಳಿಗೆ ಇನ್ನೂ ಮದುವೆ ಆಗದೆ ಇದ್ದಿದ್ರಿಂದ ‘ನಾನು ಗರ್ಭಿಣಿ’ ಅಂತ ಯೋಸೇಫನಿಗೆ ಹೇಳೋಕೆ ಎಷ್ಟು ಕಷ್ಟ ಆಗಿರಬೇಕು ಅಂತ ಅವಳ ಜಾಗದಲ್ಲಿ ನಿಂತು ಯೋಚಿಸಿ. ಈಗ ಮರಿಯಗೆ ಖಂಡಿತ ಯಾರದ್ದಾದ್ರೂ ಸಹಾಯ ಬೇಕಾಗಿರುತ್ತೆ ಅಲ್ವಾ? (ಲೂಕ 1:26-33) ಮರಿಯಗೆ ದೊಡ್ಡ ಜವಾಬ್ದಾರಿ ಸಿಕ್ಕಿದೆ. ಅದನ್ನ ಮಾಡಿ ಮುಗಿಸೋಕೆ ಅವಳಿಗೆ ಬೇರೆಯವ್ರ ಸಹಾಯ ಬೇಕೇ ಬೇಕಿತ್ತು. ಅದನ್ನ ಅವಳು ಪಡ್ಕೊಂಡಳು. ಅದಕ್ಕೆ ಅವಳು ಗಬ್ರಿಯೇಲನ ಹತ್ರ ಜಾಸ್ತಿ ವಿಷ್ಯ ಕೇಳಿ ತಿಳ್ಕೊಂಡಳು. (ಲೂಕ 1:34) ಅಷ್ಟೇ ಅಲ್ಲ, ಅವಳು ತನ್ನ ಸಂಬಂಧಿಕಳಾದ ಎಲಿಸಬೆತ್‌ನ ನೋಡೋಕೆ “ಬೆಟ್ಟಗುಡ್ಡಗಳ ಪ್ರದೇಶವಾಗಿದ್ದ” ಯೆಹೂದದ ಒಂದು ಪಟ್ಟಣಕ್ಕೆ ಹೋದಳು. ಎಲಿಸಬೆತ್‌ ಮರಿಯಳನ್ನ ನೋಡಿದ ತಕ್ಷಣ ಖುಷಿಪಟ್ಟಳು, ಅವಳನ್ನ ಹೊಗಳಿದಳು. ಅಷ್ಟೇ ಅಲ್ಲ, ಮರಿಯಳ ಹೊಟ್ಟೆಯಲ್ಲಿರೋ ಮಗುವಿನ ಬಗ್ಗೆ ಒಂದು ಭವಿಷ್ಯವಾಣಿ ಹೇಳೋ ತರ ಯೆಹೋವ ಅವಳನ್ನ ಪ್ರೇರಿಸಿದನು. (ಲೂಕ 1:39-45) ಇದನ್ನೆಲ್ಲ ಕೇಳಿದಾಗ ಮರಿಯಾಗೆ ಪ್ರೋತ್ಸಾಹ ಸಿಕ್ತಾ? ಹೌದು. “ದೇವರು ತನ್ನ ಕೈಯಿಂದ ಶಕ್ತಿಶಾಲಿ ಕೆಲಸಗಳನ್ನ ಮಾಡಿದ್ದಾನೆ” ಅಂತ ಅವಳು ಹೇಳಿದಳು. (ಲೂಕ 1:46-51) ಹೀಗೆ ಗಬ್ರಿಯೇಲ ಮತ್ತು ಎಲಿಸಬೆತ್‌ನಿಂದ ಯೆಹೋವ ದೇವರು ಮರಿಯಗೆ ಸಹಾಯ ಮಾಡಿದನು. w23.10 14-15 ¶10-12

ದಿನದ ವಚನ ಓದಿ ಚರ್ಚಿಸೋಣ—2025

ಶುಕ್ರವಾರ, ಜುಲೈ 18

ಅಷ್ಟೇ ಅಲ್ಲ ತನ್ನ ತಂದೆ ಅಂದ್ರೆ ದೇವರಿಗೋಸ್ಕರ ನಮ್ಮನ್ನ ರಾಜರಾಗಿ, ಪುರೋಹಿತರಾಗಿ ಮಾಡ್ತಾನೆ.—ಪ್ರಕ. 1:6.

ಯೇಸುವಿನ ಶಿಷ್ಯರಲ್ಲಿ 1,44,000 ಜನ ಮಾತ್ರ ಪವಿತ್ರ ಶಕ್ತಿಯಿಂದ ಅಭಿಷೇಕ ಆಗಿದ್ದಾರೆ. ಅವ್ರಿಗೆ ಯೆಹೋವನ ಜೊತೆ ವಿಶೇಷವಾದ ಸಂಬಂಧ ಇದೆ. ಅವರು ಮುಂದೆ ಯೇಸು ಜೊತೆ ಸ್ವರ್ಗದಲ್ಲಿ ಪುರೋಹಿತರಾಗಿ ಸೇವೆ ಮಾಡ್ತಾರೆ. (ಪ್ರಕ. 14:1) ಅವರು ಭೂಮಿಯಲ್ಲಿ ಇರುವಾಗಲೇ ಯೆಹೋವ ಅವ್ರನ್ನ ತನ್ನ ಮಕ್ಕಳಾಗಿ ದತ್ತು ತಗೊಂಡಾಗ ಅವರು ಪವಿತ್ರ ಸ್ಥಳಕ್ಕೆ ಹೋದ ಹಾಗಿರುತ್ತೆ. (ರೋಮ. 8:15-17) ಅತಿ ಪವಿತ್ರ ಸ್ಥಳ ಅಂದ್ರೆ ಅದು ಯೆಹೋವ ಇರೋ ಜಾಗ. ಅದು ಸ್ವರ್ಗ. ಪವಿತ್ರ ಸ್ಥಳ ಮತ್ತು ಅತಿ ಪವಿತ್ರ ಸ್ಥಳದ ಮಧ್ಯ ಇದ್ದ “ಪರದೆ” ಯೇಸುವಿನ ದೇಹನ ಸೂಚಿಸುತ್ತೆ. ಯೆಹೋವನ ಆಧ್ಯಾತ್ಮಿಕ ಆಲಯದ ಶ್ರೇಷ್ಠ ಮಹಾ ಪುರೋಹಿತನಾಗಿ ಯೇಸು ಸ್ವರ್ಗಕ್ಕೆ ಹೋಗಬೇಕಾದ್ರೆ ಪರದೆ ತರ ಇದ್ದ ತನ್ನ ಮಾನವ ದೇಹವನ್ನ ತ್ಯಾಗ ಮಾಡಬೇಕಿತ್ತು. ತನ್ನ ಮಾನವ ಜೀವವನ್ನ ಬಿಡುಗಡೆ ಬೆಲೆಯಾಗಿ ಕೊಟ್ಟಿದ್ರಿಂದ ಅಭಿಷಿಕ್ತ ಕ್ರೈಸ್ತರಿಗೆಲ್ಲ ಸ್ವರ್ಗಕ್ಕೆ ಹೋಗೋಕೆ ಅವಕಾಶ ಆತನು ಮಾಡ್ಕೊಟ್ಟನು. ಅಭಿಷಿಕ್ತರು ಸ್ವರ್ಗಕ್ಕೆ ಹೋಗಬೇಕಂದ್ರೆ ಅವರು ಕೂಡ ಯೇಸು ತರ ಮಾನವ ಶರೀರನ ಬಿಟ್ಟುಹೋಗಬೇಕು.—ಇಬ್ರಿ. 10:19, 20; 1 ಕೊರಿಂ. 15:50. w23.10 28 ¶13

ದಿನದ ವಚನ ಓದಿ ಚರ್ಚಿಸೋಣ—2025

ಶನಿವಾರ, ಜುಲೈ 19

ಗಿದ್ಯೋನ್‌ . . . ಬಗ್ಗೆ ನಾನು ವಿವ್ರವಾಗಿ ಹೇಳಬೇಕಾದ್ರೆ ನನಗೆ ಸಮಯ ಸಾಕಾಗಲ್ಲ.—ಇಬ್ರಿ. 11:32.

ಎಫ್ರಾಯೀಮ್ಯರು ಗಿದ್ಯೋನನ ಮೇಲೆ ಜಗಳಕ್ಕೆ ಬಂದಾಗ ಅವನು ತಕ್ಷಣ ಕೋಪ ಮಾಡ್ಕೊಳ್ಳಲಿಲ್ಲ. (ನ್ಯಾಯ. 8:1-3) ಅವರು ಹೇಳೋದನ್ನ ತಾಳ್ಮೆಯಿಂದ ಕೇಳಿಸ್ಕೊಂಡ. ಆಮೇಲೆ ಸಮಾಧಾನವಾಗಿ ಉತ್ರ ಕೊಟ್ಟ. ಹೀಗೆ ಅವ್ರ ಕೋಪನ ತಣ್ಣಗೆ ಮಾಡಿದ. ಗಿದ್ಯೋನನ ತರ ಹಿರಿಯರು ಕೂಡ ತಮ್ಮ ಬಗ್ಗೆ ಯಾರಾದ್ರೂ ತಪ್ಪಾಗಿ ಮಾತಾಡಿದಾಗ ತಕ್ಷಣ ಕೋಪ ಮಾಡ್ಕೊಬಾರದು. ಅವರು ಹೇಳೋದನ್ನ ಚೆನ್ನಾಗಿ ಕೇಳಿಸ್ಕೊಬೇಕು. ಸಮಾಧಾನವಾಗಿ ಉತ್ರ ಕೊಡಬೇಕು. (ಯಾಕೋ. 3:13 ) ಹಿರಿಯರು ಹೀಗೆ ದೀನತೆ ತೋರಿಸಿದ್ರೆ ಸಭೆಯಲ್ಲಿ ಎಲ್ರೂ ಶಾಂತಿಯಿಂದ ಇರಕ್ಕಾಗುತ್ತೆ. ಮಿದ್ಯಾನ್ಯರ ವಿರುದ್ಧ ಹೋರಾಡಿ ಗೆದ್ದಾಗ ಜನ್ರೆಲ್ಲ ಗಿದ್ಯೋನನನ್ನ ಹೊಗಳಿದ್ರು. ಆಗ ಅವನು ಆ ಹೊಗಳಿಕೆನ್ನೆಲ್ಲ ಯೆಹೋವನಿಗೆ ಕೊಟ್ಟ. (ನ್ಯಾಯ. 8:22, 23) ಹಿರಿಯರು ಗಿದ್ಯೋನನ ತರ ಹೇಗೆ ನಡ್ಕೊಬಹುದು? ಏನೇ ಮಾಡಿದ್ರೂ ಯೆಹೋವನಿಗೆ ಹೊಗಳಿಕೆ ಹೋಗೋ ತರ ನಡ್ಕೊಬೇಕು. (1 ಕೊರಿಂ. 4:6, 7) ಉದಾಹರಣೆಗೆ, ಟಾಕ್‌ ಕೊಡುವಾಗ ‘ಹೊಗಳಿಕೆ ಯೆಹೋವನಿಗೆ ಸಿಗ್ತಾ ಇದ್ಯಾ, ಇಲ್ಲ ನನಗೆ ಸಿಕ್ತಾ ಇದ್ಯಾ’ ಅಂತ ಯೋಚ್ನೆ ಮಾಡಿ. ಸಹೋದರರು ಹೊಗಳಿದಾಗ ಅವ್ರ ಗಮನ ಬೈಬಲ್‌ ಕಡೆಗೆ ಅಥವಾ ಸಂಘಟನೆಯಿಂದ ಸಿಗೋ ತರಬೇತಿ ಕಡೆಗೆ ಹೋಗೋ ತರ ಮಾಡಿ. w23.06 4 ¶7-8

ದಿನದ ವಚನ ಓದಿ ಚರ್ಚಿಸೋಣ—2025
ಸ್ವಾಗತ.
ಇದು ಯೆಹೋವನ ಸಾಕ್ಷಿಗಳು ಬೇರೆಬೇರೆ ಭಾಷೆಯಲ್ಲಿ ತಯಾರಿಸಿರುವ ಪ್ರಕಾಶನಗಳ ಸಂಶೋಧನಾ ಸಾಧನ.
ಪ್ರಕಾಶನಗಳನ್ನು ಡೌನ್‌ಲೋಡ್‌ ಮಾಡಲು ದಯವಿಟ್ಟು jw.orgಗೆ ಭೇಟಿ ಮಾಡಿ.
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ