-
2 ಅರಸು 9:24ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
24 ಯೇಹು ತನ್ನ ಬಿಲ್ಲನ್ನ ತಗೊಂಡು ಯೆಹೋರಾಮನ ಬೆನ್ನಿಗೆ ಬಾಣ ಬಿಟ್ಟ. ಅದು ಅವನ ಹೃದಯ ತೂರಿಕೊಂಡು ಹೊರಬಂತು. ಆಗ ಯೆಹೋರಾಮ ತನ್ನ ಯುದ್ಧರಥದಲ್ಲೇ ಸತ್ತುಬಿದ್ದ.
-
-
ಲೂಕ 11:49-51ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
49 ಅದಕ್ಕೇ ದೇವರು ಸಹ ವಿವೇಚನೆ ಬಳಸಿ ಹೀಗಂದನು ‘ನಾನು ಅವ್ರ ಹತ್ರ ಪ್ರವಾದಿಗಳನ್ನ, ಅಪೊಸ್ತಲರನ್ನ ಕಳಿಸ್ತೀನಿ. ಅವರು ಆ ಪ್ರವಾದಿಗಳಲ್ಲಿ, ಅಪೊಸ್ತಲರಲ್ಲಿ ಕೆಲವ್ರನ್ನ ಕೊಲ್ತಾರೆ, ಇನ್ನೂ ಕೆಲವ್ರನ್ನ ಹಿಂಸಿಸ್ತಾರೆ. 50 ಹಾಗಾಗಿ ಭೂಮಿಯಲ್ಲಿ ಮನುಷ್ಯರು ಹುಟ್ಟಿದಾಗಿಂದ ಇಲ್ಲಿ ತನಕ ಯಾರೆಲ್ಲರ ರಕ್ತ ಸುರಿದಿದೆಯೋ ಅವ್ರೆಲ್ಲರ ರಕ್ತಕ್ಕೆ ಈ ಪೀಳಿಗೆಯವರು ಲೆಕ್ಕ ಕೊಡಬೇಕು.+ 51 ಅಂದ್ರೆ ಹೇಬೆಲನ+ ರಕ್ತದಿಂದ ದೇವಾಲಯ ಮತ್ತು ಯಜ್ಞವೇದಿ ಮಧ್ಯ ಕೊಂದುಹಾಕಿದ ಜಕರೀಯನ ರಕ್ತದ ತನಕ. ಇವ್ರೆಲ್ಲರ ರಕ್ತಕ್ಕೆ ಲೆಕ್ಕ ಕೊಡಬೇಕು.’+ ಹೌದು, ನಾನು ಹೇಳ್ತಿದ್ದೀನಿ, ಈ ಪೀಳಿಗೆ ಉತ್ರ ಕೊಡಲೇಬೇಕು.
-