-
ಯೆಶಾಯ 17:12, 13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ಕೇಳು! ಜನಾಂಗಗಳ ಜನ್ರಲ್ಲಿ ಕೋಲಾಹಲ ಕೇಳಿಸ್ತಿದೆ,
ಅವರ ಗಲಭೆ ಸಮುದ್ರದ ಅಬ್ಬರದ ಹಾಗೆ ಇದೆ!
ಜನಾಂಗಗಳ ಗದ್ದಲ ಕೇಳಿಸ್ತಿದೆ,
ಅದು ದೊಡ್ಡ ಪ್ರವಾಹದ ಗರ್ಜನೆ ತರ ಇದೆ.
13 ಸಮುದ್ರ ಗರ್ಜಿಸೋ ತರ ಜನಾಂಗಗಳು ಗರ್ಜಿಸ್ತವೆ,
ಆತನು ಅವ್ರನ್ನ ಗದರಿಸ್ತಾನೆ, ಅವರು ದೂರ ಓಡಿಹೋಗ್ತಾರೆ,
ಬೆಟ್ಟದ ಮೇಲಿಂದ ಹೊಟ್ಟು ಗಾಳಿಗೆ ಹಾರಿಹೋಗೋ ಹಾಗೇ ಅವರು ಹಾರಿಹೋಗ್ತಾರೆ.
ಬಿರುಗಾಳಿಗೆ ಗಿರಗಿರನೇ ತಿರುಗೋ ಮುಳ್ಳಿನ ಪೊದೆ ತರ ಅವರು ತಿರುಗ್ತಾರೆ.
-
-
ಯೆಶಾಯ 57:20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
20 ಆದ್ರೆ ಕೆಟ್ಟವರು, ಅಲ್ಲೋಲಕಲ್ಲೋಲ ಆಗಿರೋ ಶಾಂತಗೊಳ್ಳದ ಸಮುದ್ರದ ತರ ಇದ್ದಾರೆ,
ಅದ್ರಲ್ಲಿರೋ ನೀರು ಕಡಲಪಾಚಿಯನ್ನೂ ಕೆಸ್ರನ್ನೂ ಹೊರಹಾಕ್ತಾ ಇರುತ್ತೆ.
-