-
ಕೀರ್ತನೆ 25:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
ನನ್ನ ಕಷ್ಟಗಳನ್ನ ನೋಡಿ ನನ್ನ ಶತ್ರುಗಳು ಖುಷಿಪಡೋಕೆ ಬಿಡಬೇಡ.+
-
-
ಕೀರ್ತನೆ 31:1-3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
31 ಯೆಹೋವನೇ, ನಾನು ನಿನ್ನಲ್ಲಿ ಆಶ್ರಯ ಪಡ್ಕೊಂಡಿದ್ದೀನಿ.+
ಯಾವತ್ತೂ ನನಗೆ ಅವಮಾನ ಆಗದೆ ಇರೋ ತರ ನೋಡ್ಕೊ.+
ನಿನ್ನ ನೀತಿಯ ಕಾರಣ ನನ್ನನ್ನ ಕಾಪಾಡು.+
2 ನಾನು ಹೇಳೋದನ್ನ ಬಗ್ಗಿ ಕೇಳಿಸ್ಕೊ.
ತಕ್ಷಣ ಬಂದು ನನ್ನನ್ನ ರಕ್ಷಿಸು.+
ನನಗಾಗಿ ಬೆಟ್ಟದ ಭದ್ರಕೋಟೆ ಆಗು,
ನನ್ನನ್ನ ರಕ್ಷಿಸೋಕೆ ಸುರಕ್ಷಿತ ಸ್ಥಳ ಆಗು.+
3 ಯಾಕಂದ್ರೆ ನೀನು ನನ್ನ ಕಡಿದಾದ ಬಂಡೆ, ನನ್ನ ಭದ್ರಕೋಟೆ.+
ನಿನ್ನ ಹೆಸ್ರಿಗೆ ತಕ್ಕ ಹಾಗೆ+ ನೀನು ನನ್ನನ್ನ ನಡಿಸ್ತೀಯ, ಮಾರ್ಗದರ್ಶಿಸ್ತೀಯ.+
-