11 ನನ್ನ ಮಗನೇ, ಯೆಹೋವ ನಿನ್ನ ಜೊತೆ ಇರಲಿ. ನೀನು ಯಶಸ್ವಿ ಆಗ್ತೀಯ, ದೇವರಾದ ಯೆಹೋವನ ಆಲಯ ಕಟ್ತೀಯ ಅಂತ ದೇವರು ನಿನ್ನ ಬಗ್ಗೆ ಹೇಳಿದ್ದನು. ಆ ಮಾತು ನಿಜ ಆಗ್ಲಿ.+ 12 ಯೆಹೋವ ಇಸ್ರಾಯೇಲಿನ ಮೇಲೆ ನಿನಗೆ ಅಧಿಕಾರ ಕೊಟ್ಟಾಗ ನಿನ್ನ ದೇವರಾದ ಯೆಹೋವನ ನಿಯಮ ಪುಸ್ತಕವನ್ನ ಪಾಲಿಸೋಕೆ+ ಆಗೋ ಹಾಗೇ ಆತನೇ ನಿನಗೆ ವಿವೇಚನೆ, ಯೋಚನಾ ಸಾಮರ್ಥ್ಯ ಕೊಡ್ಲಿ.+