ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೋಬ 21:19, 20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಕೆಟ್ಟವ್ರ ಪಾಪದ ಫಲವನ್ನ ಅವ್ರ ಮಕ್ಕಳು ಅನುಭವಿಸೋ ಹಾಗೆ ದೇವರು ಮಾಡ್ತಾನೆ.

      ಆದ್ರೆ ಆ ಪಾಪದ ಫಲವನ್ನ ಕೆಟ್ಟವನೇ ತಿನ್ನೋ ಹಾಗೆ ದೇವರು ಮಾಡಬೇಕು,

      ಆಗ ಅವನಿಗೆ ಆ ನೋವು ಅರ್ಥ ಆಗುತ್ತೆ.+

      20 ಅವನಿಗೆ ಬರೋ ಕಷ್ಟವನ್ನ ಅವನೇ ಕಣ್ಣಾರೆ ನೋಡ್ಲಿ,

      ಸರ್ವಶಕ್ತನ ಕಡುಕೋಪದ ಪಾತ್ರೆಯಲ್ಲಿ ಇರೋದನ್ನ ಅವನೇ ಕುಡಿಲಿ.+

  • ಯೆರೆಮೀಯ 25:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಇಸ್ರಾಯೇಲಿನ ದೇವರಾದ ಯೆಹೋವ ನನಗೆ “ಕೋಪ ಅನ್ನೋ ದ್ರಾಕ್ಷಾಮದ್ಯ ತುಂಬಿರೋ ಈ ಬಟ್ಟಲನ್ನ ನೀನು ನನ್ನ ಕೈಯಿಂದ ತಗೊ. ನಾನು ಯಾವ ದೇಶದ ಜನ್ರ ಹತ್ರ ನಿನ್ನನ್ನ ಕಳಿಸ್ತೀನೋ ಆ ಎಲ್ಲ ದೇಶದ ಜನ್ರಿಗೆ ಅದನ್ನ ಕುಡಿಸು.

  • ಯೆರೆಮೀಯ 25:28
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 28 ಅವರು ನಿನ್ನ ಕೈಯಿಂದ ಬಟ್ಟಲನ್ನ ತಗೊಂಡು ಕುಡಿಯದಿದ್ರೆ ನೀನು ಅವ್ರಿಗೆ ‘ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ “ನೀವು ಇದನ್ನ ಕುಡಿಲೇಬೇಕು!

  • ಯೆರೆಮೀಯ 49:12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ಯೆಹೋವ ಹೀಗೆ ಹೇಳ್ತಾನೆ “ನೋಡು, ಯಾರಿಗೆ ಶಿಕ್ಷೆ ವಿಧಿಸಲಿಲ್ವೋ ಅವ್ರೇ ಪಾತ್ರೆಯಲ್ಲಿ ಇರೋದನ್ನ ಕುಡಿಬೇಕಾಗಿರುವಾಗ ನಿನಗೆ ಶಿಕ್ಷೆನೇ ಸಿಗದಿರೋಕೆ ಹೇಗೆ ಸಾಧ್ಯ? ನೀನು ಶಿಕ್ಷೆಯಿಂದ ತಪ್ಪಿಸ್ಕೊಳ್ಳೋಕೆ ಆಗೋದೇ ಇಲ್ಲ, ಪಾತ್ರೆಯಲ್ಲಿ ಇರೋದನ್ನ ನೀನು ಪೂರ್ತಿ ಕುಡಿಲೇಬೇಕಾಗುತ್ತೆ.”+

  • ಪ್ರಕಟನೆ 14:9, 10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಅವ್ರ ಹಿಂದೆ ಮೂರನೇ ದೇವದೂತ ಬಂದು ಜೋರಾಗಿ ಹೀಗೆ ಹೇಳಿದ: “ಯಾರಾದ್ರೂ ಕಾಡುಪ್ರಾಣಿಯನ್ನಾಗಲಿ+ ಅದ್ರ ಮೂರ್ತಿಯನ್ನಾಗಲಿ ಆರಾಧಿಸಿ ತಮ್ಮ ಹಣೆ ಮೇಲೆ ಅಥವಾ ಕೈ ಮೇಲೆ ಅದ್ರ ಗುರುತನ್ನ ಹಾಕೊಂಡ್ರೆ+ 10 ಅವರು ದೇವರ ಕೋಪ ಅನ್ನೋ ದ್ರಾಕ್ಷಾಮದ್ಯವನ್ನ ಕುಡಿಬೇಕಾಗುತ್ತೆ. ಅದು ತುಂಬ ಕಡಕ್ಕಾಗಿರೋ ದ್ರಾಕ್ಷಾಮದ್ಯ.+ ದೇವರು ತನ್ನ ಕ್ರೋಧ ಅನ್ನೋ ಪಾತ್ರೆಯಲ್ಲಿ ಅದನ್ನ ಸುರಿತಾನೆ. ಆ ವ್ಯಕ್ತಿ ಪವಿತ್ರ ದೇವದೂತರ ಮುಂದೆ, ಕುರಿಮರಿಯ ಮುಂದೆ ಬೆಂಕಿ ಗಂಧಕದಲ್ಲಿ ಚಿತ್ರಹಿಂಸೆಯನ್ನ ಅನುಭವಿಸ್ತಾನೆ.+

  • ಪ್ರಕಟನೆ 16:19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಆಗ ಮಹಾ ಪಟ್ಟಣ+ ಒಡೆದು ಮೂರು ಭಾಗ ಆಯ್ತು. ದೇಶಗಳ ಪಟ್ಟಣಗಳು ನಾಶ ಆದ್ವು. ದೇವರು ಮಹಾ ಬಾಬೆಲನ್ನ+ ನೆನಪಿಸ್ಕೊಂಡು ತನ್ನ ಮಹಾ ಕೋಪ ಅನ್ನೋ ದ್ರಾಕ್ಷಾಮದ್ಯದ ಬಟ್ಟಲನ್ನ ಅವಳಿಗೆ ಕೊಟ್ಟ.+

  • ಪ್ರಕಟನೆ 18:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಅವಳು ಬೇರೆಯವರಿಗೆ ಕೆಟ್ಟದ್ದನ್ನ ಮಾಡಿದ್ದಾಳೆ. ಅದನ್ನೇ ಅವಳಿಗೂ ಮಾಡಿ.+ ಎರಡು ಪಟ್ಟು ಮಾಡಿ.+ ಅವಳು ಕಲಸಿದ ಬಟ್ಟಲಲ್ಲೇ+ ಅವಳಿಗೋಸ್ಕರ ಖಡಕ್ಕಾಗಿ ಎರಡು ಪಟ್ಟು ಕಲಸಿ ಕೊಡಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ