33 ಆ ಮಾತನ್ನ ದೇವರು ಯೇಸುಗೆ ಮತ್ತೆ ಜೀವ ಕೊಡೋ ಮೂಲಕ ಪೂರ್ವಜರ ಮಕ್ಕಳಾದ ನಮಗೋಸ್ಕರ ಪೂರ್ತಿ ನೆರವೇರಿಸಿದ್ದಾನೆ.+ ಹೀಗೆ ‘ನೀನು ನನ್ನ ಮಗ, ಇವತ್ತಿಂದ ನಾನು ನಿನ್ನ ಅಪ್ಪ’+ ಅಂತ ಎರಡನೇ ಕೀರ್ತನೆಯಲ್ಲಿ ಬರೆದಿರೋ ಮಾತು ನಿಜ ಆಯ್ತು.
5 ಉದಾಹರಣೆಗೆ, ದೇವದೂತರಲ್ಲಿ ಯಾರಿಗಾದ್ರೂ ದೇವರು “ನೀನು ನನ್ನ ಮಗ, ಇವತ್ತಿಂದ ನಾನು ನಿನ್ನ ಅಪ್ಪ”+ ಅಂತಾಗಲಿ “ನಾನು ಅವನಿಗೆ ಅಪ್ಪ ಆಗ್ತೀನಿ ಮತ್ತು ಅವನು ನನಗೆ ಮಗ ಆಗ್ತಾನೆ” ಅಂತಾಗಲಿ ಯಾವತ್ತಾದ್ರೂ ಹೇಳಿದ್ನಾ?+
5 ಕ್ರಿಸ್ತನ ವಿಷ್ಯದಲ್ಲೂ ಹಾಗೆ. ಯೇಸು ತನ್ನನ್ನ ತಾನೇ ಮಹಾ ಪುರೋಹಿತನಾಗಿ ನೇಮಿಸ್ಕೊಂಡು ಮಹಿಮೆ ತಗೊಳ್ಳಲಿಲ್ಲ.+ ಆತನಿಗೆ ದೇವರೇ ಆ ಮಹಿಮೆ ಕೊಟ್ಟನು. ಆತನಿಗೆ ದೇವರು “ನೀನು ನನ್ನ ಮಗ. ಇವತ್ತಿಂದ ನಾನು ನಿನ್ನ ಅಪ್ಪ” ಅಂತ ಹೇಳಿದನು.+