ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 4:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ನೀವು ಕಣ್ಣಾರೆ ನೋಡಿದ ವಿಷ್ಯಗಳನ್ನ ಮರಿಬೇಡಿ. ಆ ವಿಷ್ಯಗಳು ನಿಮ್ಮ ಜೀವನಪೂರ್ತಿ ಹೃದಯದಲ್ಲಿ ಇರೋ ತರ ನೋಡ್ಕೊಳ್ಳಿ. ಅದನೆಲ್ಲ ನಿಮ್ಮ ಮಕ್ಕಳಿಗೆ ಮೊಮ್ಮಕ್ಕಳಿಗೆ ಹೇಳಿ.+

  • ಧರ್ಮೋಪದೇಶಕಾಂಡ 6:6, 7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಇವತ್ತು ನಾನು ಹೇಳೋ ಈ ಮಾತುಗಳು ನಿಮ್ಮ ಹೃದಯದಲ್ಲಿ ಇರಬೇಕು. 7 ಇದನ್ನ ನಿಮ್ಮ ಮಕ್ಕಳ ಹೃದಯದಲ್ಲಿ ಅಚ್ಚೊತ್ತಬೇಕು.*+ ಮನೇಲಿ ಕೂತಿರುವಾಗ ದಾರೀಲಿ ನಡಿವಾಗ ಮಲಗುವಾಗ ಏಳುವಾಗ ನೀವು ಇದ್ರ ಬಗ್ಗೆ ಅವ್ರ ಹತ್ರ ಮಾತಾಡಬೇಕು.+

  • ಧರ್ಮೋಪದೇಶಕಾಂಡ 6:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ‘ನಾವು ಈಜಿಪ್ಟಲ್ಲಿ ಫರೋಹನಿಗೆ ಗುಲಾಮರಾಗಿದ್ವಿ. ಆದ್ರೆ ಯೆಹೋವ ತನ್ನ ಮಹಾ ಶಕ್ತಿ ತೋರಿಸಿ* ನಮ್ಮನ್ನ ಅಲ್ಲಿಂದ ಕರ್ಕೊಂಡು ಬಂದನು.

  • ಧರ್ಮೋಪದೇಶಕಾಂಡ 11:18, 19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ನನ್ನ ಈ ಮಾತುಗಳನ್ನ ನಿಮ್ಮ ಹೃದಯದಲ್ಲಿ ಅಚ್ಚೊತ್ತಬೇಕು, ನಿಮ್ಮ ಜೀವನದಲ್ಲಿ* ಅನ್ವಯಿಸಬೇಕು. ಇವುಗಳನ್ನ ಜ್ಞಾಪಕ ಪಟ್ಟಿ ತರ ಕೈಗೆ, ಹಣೆಪಟ್ಟಿ ತರ ಹಣೆಗೆ ಕಟ್ಕೊಬೇಕು.+ 19 ಇವುಗಳನ್ನ ನಿಮ್ಮ ಮಕ್ಕಳಿಗೆ ಕಲಿಸಬೇಕು. ಮನೇಲಿ ಕೂತಿರುವಾಗ, ದಾರೀಲಿ ನಡಿವಾಗ, ಮಲಗುವಾಗ ಏಳುವಾಗ ಇವುಗಳ ಬಗ್ಗೆ ಅವ್ರ ಜೊತೆ ಮಾತಾಡಬೇಕು.+

  • ಯೆಹೋಶುವ 4:6, 7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ದೇವರು ನಿಮಗಾಗಿ ಏನು ಮಾಡಿದ್ದಾನೆ ಅಂತ ಆ ಕಲ್ಲುಗಳು ನಿಮಗೆ ನೆನಪಿಸುತ್ತೆ. ಮುಂದೊಂದು ದಿನ ನಿಮ್ಮ ಮಕ್ಕಳು* ‘ಈ ಕಲ್ಲುಗಳನ್ನ ಯಾಕೆ ಇಲ್ಲಿ ಇಟ್ಟಿದ್ದೀರ?’ ಅಂತ ಕೇಳಿದ್ರೆ+ 7 ‘ಯೆಹೋವನ ಒಪ್ಪಂದದ ಮಂಜೂಷ ಯೋರ್ದನ್‌ ನದಿ ದಾಟುವಾಗ ನದಿ ಹರಿಯದೆ ನಿಂತೋಯ್ತು.+ ಅದನ್ನ ಇಸ್ರಾಯೇಲ್‌ ಜನ ಯಾವಾಗ್ಲೂ ನೆನಪಲ್ಲಿಡೋಕೆ* ಈ ಕಲ್ಲುಗಳನ್ನ ಇಲ್ಲಿ ಇಟ್ಟಿದ್ದಾರೆ’ ಅಂತ ಹೇಳಬೇಕು.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ