21 ಆಮೇಲೆ ನಾನು ನಿಮ್ಮ ಪಾಪಕ್ಕೆ ಸಾಕ್ಷಿಯಾಗಿದ್ದ ಕರುವಿನ ಮೂರ್ತಿಯನ್ನ+ ತೆಗೆದು ಬೆಂಕಿಯಲ್ಲಿ ಸುಟ್ಟುಬಿಟ್ಟೆ. ಅದನ್ನ ಜಜ್ಜಿ ಚೆನ್ನಾಗಿ ಅರೆದು ಧೂಳಿನ ಹಾಗೆ ಪುಡಿಪುಡಿ ಮಾಡಿ ಬೆಟ್ಟದಿಂದ ಹರಿದು ಬರೋ ತೊರೆಯಲ್ಲಿ ಚೆಲ್ಲಿದೆ.+
22 ಆಮೇಲೆ ತಬೇರಾ,+ ಮಸ್ಸ+ ಮತ್ತು ಕಿಬ್ರೋತ್-ಹತಾವಾದಲ್ಲಿ+ ಕೂಡ ನೀವು ಯೆಹೋವನಿಗೆ ಕೋಪ ಬರೋ ತರ ಮಾಡಿದ್ರಿ.