-
ಅರಣ್ಯಕಾಂಡ 14:2-4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ಮೋಶೆ, ಆರೋನರ ವಿರುದ್ಧ ಗೊಣಗೋಕೆ ಶುರು ಮಾಡಿದ್ರು.+ ಎಲ್ರು ಅವರಿಬ್ರ ವಿರುದ್ಧ ಮಾತಾಡ್ತಾ “ನಾವು ಈಜಿಪ್ಟ್ ದೇಶದಲ್ಲೇ ಸತ್ತಿದ್ರೆ ಚೆನ್ನಾಗಿರುತ್ತಿತ್ತು. ಈ ಕಾಡಲ್ಲಾದ್ರೂ ಸಾಯಬಾರದಿತ್ತಾ? 3 ಯೆಹೋವ ನಮ್ಮನ್ನ ಯಾಕೆ ಆ ದೇಶಕ್ಕೆ ಕರ್ಕೊಂಡು ಹೋಗ್ತಿದ್ದಾನೆ? ನಮ್ಮನ್ನ ಕತ್ತಿಯಿಂದ ಸಾಯಿಸಬೇಕಂತಾನಾ?+ ನಮ್ಮ ಹೆಂಡತಿ-ಮಕ್ಕಳು ಸೆರೆಯಾಗಿ ಹೋಗಬೇಕಂತಾನಾ?+ ಇದಕ್ಕಿಂತ ನಾವು ಈಜಿಪ್ಟಿಗೆ ವಾಪಸ್ ಹೋಗೋದೇ ಒಳ್ಳೇದು”+ ಅಂದ್ರು. 4 ಅಷ್ಟೇ ಅಲ್ಲ “ನಾವೇ ಒಬ್ಬ ನಾಯಕನನ್ನ ಆರಿಸ್ಕೊಂಡು ಈಜಿಪ್ಟ್‌ಗೆ ವಾಪಸ್ ಹೋಗೋಣ” ಅಂತ ಮಾತಾಡ್ಕೊಳ್ತಾ ಇದ್ರು!+
-
-
1 ಕೊರಿಂಥ 10:8-10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಅವ್ರಲ್ಲಿ ಸ್ವಲ್ಪ ಜನ ಲೈಂಗಿಕ ಅನೈತಿಕತೆ* ಮಾಡಿದ್ರಿಂದ ಒಂದೇ ದಿನದಲ್ಲಿ 23,000 ಜನ ಸತ್ರು. ನಾವು ಅವ್ರ ತರ ಲೈಂಗಿಕ ಅನೈತಿಕತೆ* ಮಾಡೋದು ಬೇಡ.+ 9 ಅವ್ರಲ್ಲಿ ಸ್ವಲ್ಪ ಜನ ಯೆಹೋವನನ್ನ* ಪರೀಕ್ಷಿಸಿದ್ರಿಂದ+ ಹಾವು ಕಚ್ಚಿ ಸತ್ತುಹೋದ್ರು. ನಾವು ಅವ್ರ ತರ ದೇವರನ್ನ ಪರೀಕ್ಷಿಸೋದು ಬೇಡ.+ 10 ಅವ್ರಲ್ಲಿ ಸ್ವಲ್ಪ ಜನ ಗೊಣಗಿ+ ನಾಶಕನ ಕೈಯಿಂದ ಸತ್ರು.+ ನಾವು ಅವ್ರ ತರ ಗೊಣಗೋದು ಬೇಡ.
-