27 ಹಾಗಾಗಿ ಅವ್ರನ್ನ ಶತ್ರುಗಳ ಕೈಗೆ ಒಪ್ಪಿಸಿದೆ.+ ಆ ಶತ್ರುಗಳು ತುಂಬ ಕಷ್ಟ ಕೊಟ್ರು.+ ಆ ಕಷ್ಟದಿಂದಾಗಿ ಅವರು ಪ್ರಾರ್ಥನೆ ಮಾಡಿದಾಗೆಲ್ಲ ನೀನು ಸ್ವರ್ಗದಿಂದ ಕೇಳಿಸ್ಕೊಳ್ತಿದ್ದೆ. ಅವ್ರ ಕೈಯಿಂದ ಕಾಪಾಡೋಕೆ ರಕ್ಷಕರನ್ನ ಕಳಿಸ್ತಿದ್ದೆ.+ ಹೀಗೆ ನಿನ್ನ ಮಹಾ ಕರುಣೆಯನ್ನ ತೋರಿಸ್ತಾ ಹೋದೆ.
9 ಆದ್ರೆ ಅವರು ಯಾವ ಜನಾಂಗಗಳ ಮಧ್ಯ ಜೀವಿಸ್ತಿದ್ರೋ ಆ ಜನಾಂಗಗಳ ಮುಂದೆ ನನ್ನ ಹೆಸ್ರು ಅಪವಿತ್ರ ಆಗಬಾರದು ಅಂತ ನನ್ನ ಹೆಸ್ರಿಗೋಸ್ಕರ ಹೆಜ್ಜೆ ತಗೊಂಡೆ.+ ಇಸ್ರಾಯೇಲ್ಯರನ್ನ ಈಜಿಪ್ಟಿಂದ ಹೊರಗೆ ಕರ್ಕೊಂಡು ಬರುವಾಗ ಆ ಜನಾಂಗಗಳ ಮುಂದೆ ಇಸ್ರಾಯೇಲ್ಯರಿಗೆ ನನ್ನ ಬಗ್ಗೆ ಹೇಳಿದೆ.+