6 “ನೀತಿಯಿಂದ ನಡ್ಕೊಳ್ಳೋ ಯೆಹೋವನಾದ ನಾನು, ನಿನ್ನನ್ನ ಕರೆದಿದ್ದೀನಿ.
ನಾನು ನಿನ್ನ ಕೈ ಹಿಡ್ಕೊಂಡಿದ್ದೀನಿ.
ನಾನು ನಿನ್ನನ್ನ ಕಾದುಕಾಪಾಡ್ತೀನಿ. ನನ್ನ ಮತ್ತು ಜನ್ರ ಮಧ್ಯ ನೀನು ಒಂದು ಒಪ್ಪಂದ ಆಗೋ ತರ+
ಜನಾಂಗಗಳಿಗೆ ನೀನು ಬೆಳಕಾಗೋ ತರ ಮಾಡ್ತೀನಿ.+
7 ನೀನು ಕುರುಡನ ಕಣ್ಣುಗಳನ್ನ ತೆರಿಯೋಕೆ,+
ಸೆರೆಯಿಂದ ಕೈದಿಯನ್ನ ಬಿಡಿಸೋಕೆ,
ಸೆರೆಯ ಅಂಧಕಾರದಲ್ಲಿ ಕುಳಿತಿರುವವ್ರನ್ನ ಹೊರತರೋಕೆ ನಾನು ಹೀಗೆ ಮಾಡ್ತೀನಿ.+