29 ಬಳಲಿದವನಿಗೆ ಆತನು ಶಕ್ತಿ ಕೊಡ್ತಾನೆ,
ನಿರ್ಬಲನಿಗೆ ಆತನು ತುಂಬ ಬಲ ಕೊಡ್ತಾನೆ.+
30 ಹುಡುಗರು ದಣಿದು ಬಳಲಿ ಹೋಗ್ತಾರೆ,
ಯುವಕರು ಎಡವಿ ಬೀಳ್ತಾರೆ.
31 ಆದ್ರೆ ಯೆಹೋವನಲ್ಲಿ ನಿರೀಕ್ಷೆ ಇಡೋರು ಹೊಸಬಲ ಪಡಿತಾರೆ.
ಹದ್ದಿನ ತರ ರೆಕ್ಕೆಗಳನ್ನ ಚಾಚಿ ಅವರು ಎತ್ರದಲ್ಲಿ ಹಾರ್ತಾರೆ.+
ಅವರು ಓಡಿದ್ರೂ ದಣಿಯಲ್ಲ,
ಅವರು ನಡೆದ್ರೂ ಬಳಲಿ ಹೋಗಲ್ಲ.”+