16 ದೇವರ ಮುಂದೆ ತಮ್ಮ ಸಿಂಹಾಸನದ ಮೇಲೆ ಕೂತಿದ್ದ 24 ಹಿರಿಯರು+ ಮಂಡಿಯೂರಿ ದೇವರನ್ನ ಆರಾಧಿಸಿದ್ರು. 17 ಅವರು ಹೀಗೆ ಹೇಳಿದ್ರು: “ಯೆಹೋವ* ದೇವರೇ, ಸರ್ವಶಕ್ತನೇ, ನೀನು ಈಗ ಇರುವವನು,+ ಈ ಮುಂಚೆನೂ ಇದ್ದವನು. ನಾವು ನಿನಗೆ ಧನ್ಯವಾದ ಹೇಳ್ತೀವಿ. ಯಾಕಂದ್ರೆ ನೀನು ನಿನ್ನ ಮಹಾ ಅಧಿಕಾರದಿಂದ ರಾಜನಾಗಿ ಆಳೋಕೆ ಶುರು ಮಾಡಿದ್ದೀಯ.+
6 ಆಗ ಒಂದು ಶಬ್ದ ಬಂತು. ಅದು ತುಂಬ ಜನ್ರ ಶಬ್ದದ ತರ, ಪ್ರವಾಹದ ಶಬ್ದದ ತರ, ದೊಡ್ಡ ಗುಡುಗಿನ ಶಬ್ದದ ತರ ಇತ್ತು. ಅವರು ಹೀಗೆ ಹೇಳಿದ್ರು: “ಯಾಹುವನ್ನ ಸ್ತುತಿಸಿ.*+ ನಮ್ಮ ದೇವರಾದ ಯೆಹೋವ* ಸರ್ವಶಕ್ತ.+ ಆತನು ರಾಜನಾಗಿ ಆಳೋದನ್ನ ಶುರುಮಾಡಿದ್ದಾನೆ.+