8 “ಯೆಹೋವನಿಗೆ ಧನ್ಯವಾದ ಹೇಳಿ,+ ಆತನ ಹೆಸ್ರಲ್ಲಿ ಪ್ರಾರ್ಥಿಸಿ,
ಆತನ ಕೆಲಸಗಳ ಬಗ್ಗೆ ಬೇರೆ ಜನ್ರಿಗೆ ಹೇಳಿ!+
9 ಆತನಿಗೆ ಹಾಡನ್ನ ಹಾಡಿ, ಆತನನ್ನ ಹೊಗಳಿ,+
ಆತನ ಎಲ್ಲ ಅದ್ಭುತಗಳ ಬಗ್ಗೆ ಧ್ಯಾನಿಸಿ.+
10 ಹೆಮ್ಮೆಯಿಂದ ಆತನ ಪವಿತ್ರ ಹೆಸ್ರನ್ನ ಕೊಂಡಾಡಿ.+
ಯೆಹೋವನನ್ನ ಹುಡುಕುವವರು ಸಂತೋಷ ಪಡಲಿ.+
11 ಯೆಹೋವನಿಗಾಗಿ, ಆತನ ಬಲಕ್ಕಾಗಿ ಹುಡುಕಿ.+
ಆತನ ಮೆಚ್ಚುಗೆ ಪಡಿಯೋಕೆ ಪ್ರಯತ್ನಿಸ್ತಾ ಇರಿ.+
12 ಆತನು ಮಾಡಿದ ಮಹತ್ಕಾರ್ಯಗಳನ್ನ,+
ಅದ್ಭುತಗಳನ್ನ, ತೀರ್ಪುಗಳನ್ನ ನೆನಪಿಸ್ಕೊಳ್ಳಿ,
13 ಆತನ ಸೇವಕನಾದ ಇಸ್ರಾಯೇಲಿನ ಸಂತತಿಯೇ,+
ಯಾಕೋಬನ ಮಕ್ಕಳೇ, ಆತನು ಆರಿಸ್ಕೊಂಡ ಜನ್ರೇ,+ ಅದನ್ನ ನೆನಪಿಸ್ಕೊಳ್ಳಿ.