ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 17:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ನೀನು ವಿದೇಶಿಯಾಗಿ+ ಜೀವಿಸ್ತಿರೋ ಇಡೀ ಕಾನಾನ್‌ ದೇಶವನ್ನ ನಿನಗೆ, ನಿನ್ನ ಸಂತತಿಗೆ ಶಾಶ್ವತ ಆಸ್ತಿಯಾಗಿ ಕೊಡ್ತೀನಿ. ನಾನು ಅವರಿಗೆ ದೇವರಾಗಿ ಇರ್ತಿನಿ.”+

  • ಆದಿಕಾಂಡ 23:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 “ನಾನು ಬೇರೆ ದೇಶದವನು, ಇಲ್ಲಿಗೆ ವಲಸೆ ಬಂದಿದ್ದೀನಿ.+ ಹಾಗಾಗಿ ನನ್ನ ಹೆಂಡತಿ ಸಮಾಧಿಗೋಸ್ಕರ ನನಗೆ ಇಲ್ಲಿ ಒಂದು ಜಾಗ ಕೊಡಿ” ಅಂದ.

  • 1 ಪೂರ್ವಕಾಲವೃತ್ತಾಂತ 16:19-22
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಅವರು ಆಗ ಸ್ವಲ್ಪ ಜನ ಇದ್ರು,

      ಹೌದು, ಕಡಿಮೆ ಜನ ಇದ್ರು. ಆ ದೇಶದಲ್ಲಿ ಅವರು ವಿದೇಶಿಗಳಾಗಿದ್ರು.+

      20 ಅವರು ಒಂದು ದೇಶದಿಂದ ಇನ್ನೊಂದು ದೇಶಕ್ಕೆ,

      ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗ್ತಿದ್ರು.+

      21 ಯಾರಿಂದನೂ ಅವ್ರಿಗೆ ಅನ್ಯಾಯ ಆಗದ ಹಾಗೆ ಆತನು ನೋಡ್ಕೊಂಡ,+

      ಅವ್ರಿಗೋಸ್ಕರ ರಾಜರನ್ನೂ ಬೈದನು,+

      22 ‘ನನ್ನ ಅಭಿಷಿಕ್ತರನ್ನ ಮುಟ್ಟಬೇಡಿ,

      ನನ್ನ ಪ್ರವಾದಿಗಳಿಗೆ ಏನೂ ಕೆಟ್ಟದು ಮಾಡಬೇಡಿ’ ಅಂದನು.+

  • ಅ. ಕಾರ್ಯ 7:4, 5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ದೇವರು ಹೇಳಿದ ಹಾಗೇ ಅಬ್ರಹಾಮ ಕಸ್ದೀಯರ ದೇಶ ಬಿಟ್ಟು ಹಾರಾನಿಗೆ ಬಂದು ವಾಸ ಮಾಡಿದ. ಅವನ ಅಪ್ಪ ತೀರಿಹೋದ+ ಮೇಲೆ ದೇವರು ಅವನಿಗೆ ನೀವು ವಾಸಿಸ್ತಿರೋ ಈ ದೇಶಕ್ಕೆ ಹೋಗೋಕೆ ಹೇಳಿದನು.+ 5 ಹಾಗಿದ್ರೂ ಈ ದೇಶದಲ್ಲಿ ದೇವರು ಅವನಿಗೆ ಆಸ್ತಿಯಾಗಿ ಏನನ್ನೂ ಕೊಡಲಿಲ್ಲ. ಕಡಿಮೆಪಕ್ಷ ಕಾಲಿಡುವಷ್ಟು ಜಾಗನೂ ಕೊಡಲಿಲ್ಲ. ಆದ್ರೆ ಅವನಿಗೆ, ಆಮೇಲೆ ಅವನ ವಂಶಕ್ಕೆ+ ಈ ದೇಶವನ್ನ ಆಸ್ತಿಯಾಗಿ ಕೊಡ್ತೀನಿ ಅಂತ ದೇವರು ಅವನಿಗೆ ಮಾತು ಕೊಟ್ಟನು. ಆಗಿನ್ನೂ ಅಬ್ರಹಾಮನಿಗೆ ಮಕ್ಕಳೇ ಆಗಿರ್ಲಿಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ