2 ಅಲ್ಲಿನೂ ತನ್ನ ಹೆಂಡತಿ ಸಾರಳನ್ನ ತಂಗಿ ಅಂತ ಹೇಳಿದ.+ ಹಾಗಾಗಿ ಗೆರಾರಿನ ರಾಜ ಅಬೀಮೆಲೆಕ ಸಾರಳನ್ನ ತನ್ನ ಹತ್ರ ಕರೆಸಿಕೊಂಡ.+ 3 ಆಮೇಲೆ ದೇವರು ಅಬೀಮೆಲೆಕನಿಗೆ ರಾತ್ರಿ ಕನಸಲ್ಲಿ “ನೀನು ಆ ಸ್ತ್ರೀಯನ್ನ ಕರ್ಕೊಂಡು ಬಂದಿರೋದ್ರಿಂದ ಖಂಡಿತ ಸಾಯ್ತಿಯ.+ ಅವಳಿಗೆ ಮದುವೆಯಾಗಿದೆ, ಅವಳು ಇನ್ನೊಬ್ಬನಿಗೆ ಸೇರಿದವಳು”+ ಅಂದನು.