-
ವಿಮೋಚನಕಾಂಡ 9:23-26ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
23 ಆಗ ಮೋಶೆ ಆಕಾಶದ ಕಡೆ ಕೋಲು ಎತ್ತಿದಾಗ ಗುಡುಗು, ಆಲಿಕಲ್ಲು, ಬೆಂಕಿ* ಬೀಳೋ ತರ ಯೆಹೋವ ಮಾಡಿದನು. ಈಜಿಪ್ಟ್ ದೇಶದ ಮೇಲೆ ಆಲಿಕಲ್ಲು ಬೀಳ್ತಾ ಇರೋ ಹಾಗೆ ಯೆಹೋವ ಮಾಡಿದನು. 24 ಆಲಿಕಲ್ಲು ತುಂಬ ಜೋರಾಗಿ ಬೀಳ್ತಿತ್ತು, ಅದ್ರ ಜೊತೆ ಬೆಂಕಿನೂ ಬೀಳ್ತಿತ್ತು. ಈಜಿಪ್ಟಿನ ಇತಿಹಾಸದಲ್ಲೇ ಯಾವತ್ತೂ ಈ ತರ ಆಲಿಕಲ್ಲು ಬಿದ್ದಿರಲಿಲ್ಲ.+ 25 ಆಲಿಕಲ್ಲಿಂದ ಇಡೀ ಈಜಿಪ್ಟ್ ದೇಶದಲ್ಲಿ ಬಯಲಲ್ಲಿದ್ದ ಎಲ್ಲ ನಾಶ ಆಯ್ತು. ಜನ್ರು ಪ್ರಾಣ ಕಳ್ಕೊಂಡ್ರು, ಪ್ರಾಣಿಗಳೂ ಸತ್ತೋಯ್ತು. ಎಲ್ಲ ಗಿಡ, ಮರ ನಾಶ ಆಯ್ತು.+ 26 ಆದ್ರೆ ಇಸ್ರಾಯೇಲ್ಯರು ಇದ್ದ ಗೋಷೆನ್‌ನಲ್ಲಿ ಮಾತ್ರ ಆಲಿಕಲ್ಲು ಬೀಳಲಿಲ್ಲ.+
-