-
ವಿಮೋಚನಕಾಂಡ 10:13-15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ತಕ್ಷಣ ಮೋಶೆ ತನ್ನ ಕೋಲನ್ನ ಈಜಿಪ್ಟ್ ದೇಶದ ಮೇಲೆ ಚಾಚಿದ. ಆಗ ಯೆಹೋವ ಹಗಲಿಡೀ, ರಾತ್ರಿಯಿಡೀ ಪೂರ್ವದಿಕ್ಕಿಂದ ಗಾಳಿ ಬೀಸೋ ಹಾಗೆ ಮಾಡಿದನು. ಬೆಳಿಗ್ಗೆ ನೋಡಿದಾಗ ಪೂರ್ವದಿಕ್ಕಿನ ಆ ಗಾಳಿ ಮಿಡತೆಗಳನ್ನ ಹೊತ್ತುತಂದಿತ್ತು. 14 ಮಿಡತೆಗಳು ಬಂದು ಆ ದೇಶದ ಎಲ್ಲಾ ಕಡೆ ಮುತ್ಕೊಂಡು ಬಿಡ್ತು.+ ಆ ಮಿಡತೆಗಳ ಕಾಟ ವಿಪರೀತ ಆಗಿತ್ತು.+ ಯಾವತ್ತೂ ಅಷ್ಟು ಮಿಡತೆಗಳು ಬಂದಿರಲಿಲ್ಲ, ಮುಂದೆನೂ ಬರಲ್ಲ. 15 ಮಿಡತೆಗಳ ಸಂಖ್ಯೆ ಎಷ್ಟು ಜಾಸ್ತಿ ಇತ್ತಂದ್ರೆ ಅವು ಇಡೀ ದೇಶದ ನೆಲವನ್ನ ಮುಚ್ಚಿಕೊಂಡಿತ್ತು. ಅವುಗಳಿಂದ ದೇಶದಲ್ಲೆಲ್ಲ ಕತ್ತಲೆ ಕವಿದಿತ್ತು. ಆಲಿಕಲ್ಲು ಬಿದ್ದಾಗ ನಾಶ ಆಗದೆ ಉಳಿದ ಎಲ್ಲ ಗಿಡಗಳನ್ನ, ಮರಗಳಲ್ಲಿದ್ದ ಎಲ್ಲ ಹಣ್ಣನ್ನ ಮಿಡತೆಗಳು ತಿಂದುಬಿಡ್ತು. ಇಡೀ ಈಜಿಪ್ಟ್ ದೇಶದಲ್ಲಿ ಒಂದೇ ಒಂದು ಹಸಿರು ಎಲೆ ಆಗ್ಲಿ ಹಸಿರು ಹುಲ್ಲಾಗ್ಲಿ ಕಾಣಿಸಲಿಲ್ಲ.
-