-
ಆದಿಕಾಂಡ 15:13, 14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ಆಗ ಅಬ್ರಾಮನಿಗೆ ದೇವರು ಹೀಗೆ ಹೇಳಿದನು: “ನಿನಗೆ ಒಂದು ವಿಷ್ಯ ಗೊತ್ತಿರಲಿ, ಇದು ಖಂಡಿತ ನಡಿಯುತ್ತೆ. ಅದೇನಂದ್ರೆ ನಿನ್ನ ಸಂತಾನದವರು ಬೇರೆ ದೇಶದಲ್ಲಿ ವಿದೇಶಿಗಳಾಗಿ ಇರ್ತಾರೆ. ಅಲ್ಲಿನ ಜನ ಅವರನ್ನ 400 ವರ್ಷ ಗುಲಾಮರಾಗಿ ಮಾಡ್ಕೊಂಡು ಅವರಿಗೆ ತುಂಬ ಕಷ್ಟಕೊಡ್ತಾರೆ.+ 14 ಆದ್ರೆ ಅವರು ದಾಸರಾಗಿರೋ ಆ ದೇಶಕ್ಕೆ ನಾನು ಶಿಕ್ಷೆ ಕೊಡ್ತೀನಿ.+ ಆಗ ಅವರು ಅಲ್ಲಿಂದ ಸಿಕ್ಕಾಪಟ್ಟೆ ಸೊತ್ತು ತಗೊಂಡು ಆ ದೇಶ ಬಿಟ್ಟು ಬರ್ತಾರೆ.+
-
-
ವಿಮೋಚನಕಾಂಡ 3:22ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ಪ್ರತಿಯೊಬ್ಬ ಇಸ್ರಾಯೇಲ್ಯ ಸ್ತ್ರೀ, ಅಕ್ಕಪಕ್ಕ ಮನೆಯ ಸ್ತ್ರೀಯಿಂದ, ತನ್ನ ಮನೆಯಲ್ಲಿ ವಾಸಿಸೋ ವಿದೇಶೀ ಸ್ತ್ರೀಯಿಂದ ಚಿನ್ನಬೆಳ್ಳಿಯ ಒಡವೆಗಳನ್ನ, ಬಟ್ಟೆಗಳನ್ನ ಕೇಳಬೇಕು. ಅವನ್ನ ನೀವು ನಿಮ್ಮ ಗಂಡುಹೆಣ್ಣು ಮಕ್ಕಳಿಗೆ ಹಾಕಿ. ಹೀಗೆ ನೀವು ಈಜಿಪ್ಟ್ ಜನ್ರನ್ನ ಲೂಟಿ ಮಾಡ್ತೀರ.”+
-