-
ವಿಮೋಚನಕಾಂಡ 16:12-15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 “ಇಸ್ರಾಯೇಲ್ಯರು ಗೊಣಗಿದ್ದನ್ನ ನಾನು ಕೇಳಿಸ್ಕೊಂಡಿದ್ದೀನಿ.+ ಅದಕ್ಕೆ ನೀನು ಈ ಮಾತುಗಳನ್ನ ಅವರಿಗೆ ಹೇಳು: ಸೂರ್ಯ ಮುಳುಗಿದ ಮೇಲೆ* ನೀವು ಮಾಂಸ ತಿಂತೀರ, ಬೆಳಿಗ್ಗೆ ಹೊಟ್ಟೆ ತುಂಬ ರೊಟ್ಟಿ ತಿಂತೀರ.+ ಆಗ ನಾನೇ ನಿಮ್ಮ ದೇವರಾದ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ”+ ಅಂದನು.
13 ಆ ಸಂಜೆ ಲಾವಕ್ಕಿಗಳು ಹಾರಿ ಬಂದು ಪಾಳೆಯನ ಮುಚ್ಚಿಕೊಂಡ್ವು.+ ಬೆಳಿಗ್ಗೆ ಪಾಳೆಯದ ಸುತ್ತಮುತ್ತ ಇಬ್ಬನಿಯ ಪದರ ಇತ್ತು. 14 ಆ ಇಬ್ಬನಿಯ ಪದರ ಆವಿ ಆದಾಗ ಕಾಡಿನ ನೆಲದ ಮೇಲೆಲ್ಲ ಚಿಕ್ಕಚಿಕ್ಕ ಕಾಳುಗಳು ಹಿಮದ ತರ ಬಿದ್ದಿದ್ವು.+ 15 ಇಸ್ರಾಯೇಲ್ಯರು ಅದನ್ನ ನೋಡಿ ಅದು ಏನಂತ ಗೊತ್ತಾಗದೆ ಒಬ್ರಿಗೊಬ್ರು “ಇದೇನು?” ಅಂತ ಕೇಳಿದ್ರು. ಅದಕ್ಕೆ ಮೋಶೆ “ಇದು ಯೆಹೋವ ನಿಮಗೋಸ್ಕರ ಕೊಟ್ಟ ಆಹಾರ.+
-