23 ಯೆಹೋವ ಮೋಶೆಗೆ ಮಾತು ಕೊಟ್ಟ ಹಾಗೇ ಯೆಹೋಶುವ ಇಡೀ ದೇಶವನ್ನ ತನ್ನ ವಶ ಮಾಡ್ಕೊಂಡ.+ ಅವನು ಇಸ್ರಾಯೇಲ್ಯರಿಗೆ ಅವ್ರವ್ರ ಕುಲದ ಪ್ರಕಾರ ಆಸ್ತಿಯನ್ನ ಪಾಲುಮಾಡಿ ಕೊಟ್ಟ.+ ಕೊನೆಗೆ ಯುದ್ಧ ಮುಗಿದು ದೇಶದಲ್ಲಿ ಶಾಂತಿ ಇತ್ತು.+
22 ನೀನು ರಾಜರ ರಾಜ್ಯಗಳನ್ನ, ಅವ್ರ ಜನ್ರನ್ನ ಇಸ್ರಾಯೇಲ್ಯರ ಕೈಗೆ ಒಪ್ಪಿಸಿದೆ. ಅವ್ರ ಪ್ರದೇಶಗಳನ್ನ ನಿನ್ನ ಜನ್ರಿಗೆ ಭಾಗ ಮಾಡ್ಕೊಟ್ಟೆ.+ ಅದಕ್ಕೇ ಅವರು ಹೆಷ್ಬೋನಿನ+ ರಾಜ ಸೀಹೋನನ+ ಪ್ರದೇಶವನ್ನ, ಬಾಷಾನಿನ ರಾಜ ಓಗನ+ ಪ್ರದೇಶವನ್ನ ವಶ ಮಾಡ್ಕೊಂಡ್ರು.