22 ಆದ್ರೆ ನನ್ನ ಮಹಿಮೆಯನ್ನ ನಾನು ಈಜಿಪ್ಟಲ್ಲಿ, ಕಾಡಲ್ಲಿ ಮಾಡಿದ ಅದ್ಭುತಗಳನ್ನ ಕಣ್ಣಾರೆ ನೋಡಿನೂ+ ನನ್ನನ್ನ ತುಂಬ ಸಲ ಪರೀಕ್ಷಿಸ್ತಾ+ ನನ್ನ ಮಾತನ್ನ ಕೇಳದೆ+ ಹೋದ ಇವ್ರಲ್ಲಿ ಒಬ್ಬನೂ 23 ನಾನು ಅವ್ರ ಪೂರ್ವಜರಿಗೆ ಕೊಡ್ತೀನಿ ಅಂತ ಮಾತು ಕೊಟ್ಟ ದೇಶವನ್ನ ಯಾವತ್ತೂ ನೋಡಲ್ಲ. ನನಗೆ ಗೌರವ ಕೊಡದೇ ಇರೋ ಈ ಜನ್ರಲ್ಲಿ ಒಬ್ಬನೂ ಆ ದೇಶವನ್ನ ನೋಡಲ್ಲ.+