-
ನ್ಯಾಯಸ್ಥಾಪಕರು 6:1-5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಇಸ್ರಾಯೇಲ್ಯರು ಯೆಹೋವನಿಗೆ ಇಷ್ಟ ಆಗದ ವಿಷ್ಯಗಳನ್ನ ಮತ್ತೆ ಮಾಡಿದ್ರು.+ ಹಾಗಾಗಿ ಯೆಹೋವ ಅವ್ರನ್ನ ಏಳು ವರ್ಷ ತನಕ ಮಿದ್ಯಾನ್ಯರ ಕೈಗೆ ಒಪ್ಪಿಸಿದನು.+ 2 ಮಿದ್ಯಾನ್ಯರು ಇಸ್ರಾಯೇಲ್ಯರ ಮೇಲೆ ದಬ್ಬಾಳಿಕೆ ಮಾಡಿದ್ರು.+ ಇಸ್ರಾಯೇಲ್ಯರು ಅವ್ರಿಗೆ ಹೆದರಿ ಬಚ್ಚಿಟ್ಕೊಳ್ಳೋಕೆ ಜಾಗಗಳನ್ನ* ಮಾಡ್ಕೊಂಡ್ರು. ಬೆಟ್ಟ, ಗವಿ, ಶತ್ರುಗಳು ಬರೋಕೆ ಆಗದೆ ಇದ್ದ ಪ್ರದೇಶಗಳಲ್ಲಿ ಬಚ್ಚಿಟ್ಕೊಂಡ್ರು.+ 3 ಇಸ್ರಾಯೇಲ್ಯರು ಬೀಜ ಬಿತ್ತಿದ್ರೆ ಮಿದ್ಯಾನ್ಯರು, ಅಮಾಲೇಕ್ಯರು,+ ಪೂರ್ವ ದಿಕ್ಕಲ್ಲಿರೋ ಜನ್ರು+ ದಾಳಿ ಮಾಡ್ತಿದ್ರು. 4 ಅವ್ರ ವಿರುದ್ಧ ಪಾಳೆಯ ಹೂಡಿ ಗಾಜಾ ತನಕ ಬೆಳೆ ನಾಶ ಮಾಡ್ತಿದ್ರು. ಇಸ್ರಾಯೇಲ್ಯರಿಗೆ ತಿನ್ನೋಕೆ ಏನನ್ನೂ ಉಳಿಸ್ತಾ ಇರಲಿಲ್ಲ. ಅವ್ರ ಹೋರಿ, ಕುರಿ, ಕತ್ತೆಗಳನ್ನ ಕೂಡ ಬಿಡ್ತಾ ಇರಲಿಲ್ಲ.+ 5 ಆ ಶತ್ರುಗಳು ತಮ್ಮ ಪ್ರಾಣಿಗಳನ್ನೂ ಕರ್ಕೊಂಡು ಬಂದು ಡೇರೆ ಹಾಕ್ತಿದ್ರು. ಅದನ್ನ ನೋಡಿದ್ರೆ ಆ ಜಾಗದಲ್ಲಿ ಮಿಡತೆಗಳು ಮುತ್ಕೊಂಡ ಹಾಗೆ ಕಾಣ್ತಿತ್ತು.+ ಅವ್ರನ್ನ ಅವ್ರ ಒಂಟೆಗಳನ್ನ ಲೆಕ್ಕ ಮಾಡೋಕೆ ಆಗ್ತಾ ಇರಲಿಲ್ಲ.+ ಹೀಗೆ ದೇಶವನ್ನ ನಾಶ ಮಾಡೋಕೆ ಬರ್ತಿದ್ರು.
-