9 ನಾವು ಗುಲಾಮರೇ ಆಗಿದ್ರೂ+ ನಮ್ಮ ದೇವರಾದ ನೀನು ನಮ್ಮನ್ನ ಗುಲಾಮಗಿರಿಯಲ್ಲೇ ಬಿಟ್ಟುಬಿಡಲಿಲ್ಲ. ನಿನ್ನ ಶಾಶ್ವತ ಪ್ರೀತಿ ತೋರಿಸಿ ಪರ್ಶಿಯದ ರಾಜರು ನಮಗೆ ದಯೆ ತೋರಿಸೋ ತರ ಮಾಡ್ದೆ.+ ಹಾಳುಬಿದ್ದಿದ್ದ ನಮ್ಮ ದೇವರ ಆಲಯನ ಮತ್ತೆ ಕಟ್ಟೋಕೆ ಸಹಾಯ ಮಾಡ್ದೆ.+ ಯೆಹೂದ ಮತ್ತು ಯೆರೂಸಲೇಮಲ್ಲಿ ನಮ್ಮನ್ನ ಕಾಪಾಡೋಕೆ ನಾಲ್ಕು ಕಡೆಗಳಲ್ಲೂ ರಕ್ಷಣೆಯ ಗೋಡೆಗಳನ್ನ ಎಬ್ಬಿಸಿದೆ.