-
ಕೀರ್ತನೆ 57:7-11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ದೇವರೇ, ನನ್ನ ಹೃದಯ ಸ್ಥಿರವಾಗಿದೆ,+
ಹೌದು ನನ್ನ ಹೃದಯ ಸ್ಥಿರವಾಗಿದೆ.
ನಾನು ಹಾಡ್ತೀನಿ, ಸಂಗೀತ ರಚಿಸ್ತೀನಿ.
8 ನನ್ನ ಮನಸ್ಸೇ, ಎದ್ದೇಳು.
ತಂತಿವಾದ್ಯವೇ, ಎದ್ದೇಳು. ಸಂಗೀತ ವಾದ್ಯಗಳೇ, ನೀವೂ ಎದ್ದೇಳಿ.
ನಾನು ನಸುಕನ್ನ ಎಬ್ಬಿಸ್ತೀನಿ.+
10 ಯಾಕಂದ್ರೆ ನಿನ್ನ ಶಾಶ್ವತ ಪ್ರೀತಿ ತುಂಬ ದೊಡ್ಡದು. ಆ ಪ್ರೀತಿ ಆಕಾಶವನ್ನೂ
ನಿನ್ನ ಸತ್ಯತೆ ಗಗನವನ್ನೂ ಮುಟ್ಟುತ್ತೆ.+
11 ದೇವರೇ, ನಿನ್ನ ಮಹಿಮೆ ಭೂಮಿಯಲ್ಲೆಲ್ಲಾ ಇರಲಿ,
ಮೇಲೆ ಸ್ವರ್ಗದಲ್ಲೂ ನಿನಗೆ ಗೌರವ ಸಿಗಲಿ.+
-