5 ಕ್ರಿಸ್ತನ ವಿಷ್ಯದಲ್ಲೂ ಹಾಗೆ. ಯೇಸು ತನ್ನನ್ನ ತಾನೇ ಮಹಾ ಪುರೋಹಿತನಾಗಿ ನೇಮಿಸ್ಕೊಂಡು ಮಹಿಮೆ ತಗೊಳ್ಳಲಿಲ್ಲ.+ ಆತನಿಗೆ ದೇವರೇ ಆ ಮಹಿಮೆ ಕೊಟ್ಟನು. ಆತನಿಗೆ ದೇವರು “ನೀನು ನನ್ನ ಮಗ. ಇವತ್ತಿಂದ ನಾನು ನಿನ್ನ ಅಪ್ಪ” ಅಂತ ಹೇಳಿದನು.+6 ಇನ್ನೊಂದು ವಚನದಲ್ಲಿ “ನೀನು ಮೆಲ್ಕಿಜೆದೇಕನ ತರ ಶಾಶ್ವತವಾಗಿ ಪುರೋಹಿತನಾಗಿ ಇರ್ತಿಯ” ಅಂತನೂ ದೇವರು ಹೇಳಿದ್ದಾನೆ.+
19 ಈ ನಿರೀಕ್ಷೆ+ ನಮ್ಮ ಜೀವನಕ್ಕೆ ಲಂಗರದ ಹಾಗಿದೆ. ಸಂಶಯಪಡದೆ ದೃಢವಾಗಿರೋಕೆ ಅದು ಸಹಾಯ ಮಾಡುತ್ತೆ ಮತ್ತು ಪರದೆ ದಾಟಿ ಹೋಗೋಕೆ ದಾರಿ ತೋರಿಸುತ್ತೆ.+20 ಯೇಸು+ ನಮಗಿಂತ ಮುಂಚೆ ಹೋಗಿ ನಮಗಾಗಿ ದಾರಿ ತೆರೆದು ಸಿದ್ಧ ಮಾಡಿದ್ದಾನೆ. ಮೆಲ್ಕಿಜೆದೇಕನ ಹಾಗೆ ಆತನು ಶಾಶ್ವತವಾಗಿ ಮಹಾ ಪುರೋಹಿತನಾಗಿದ್ದಾನೆ.+
3 ಅವನ ಅಪ್ಪ ಅಮ್ಮ ಯಾರಂತ ಗೊತ್ತಿಲ್ಲ, ಅವನ ವಂಶಾವಳಿ ಬಗ್ಗೆ, ಅವನ ಹುಟ್ಟು ಸಾವಿನ ಬಗ್ಗೆ ಯಾವ ದಾಖಲೆನೂ ಇಲ್ಲ. ಈ ತರ ಅವನನ್ನ ದೇವರ ಮಗನಿಗೆ ಹೋಲಿಕೆಯಾಗಿ ಮಾಡಲಾಯ್ತು. ಅವನು ಯಾವಾಗ್ಲೂ ಪುರೋಹಿತನಾಗಿದ್ದಾನೆ.+
11 ಇಸ್ರಾಯೇಲ್ಯರಿಗೆ ಕೊಟ್ಟ ನಿಯಮ ಪುಸ್ತಕದಲ್ಲಿ ಲೇವಿಯ ವಂಶದವರು ಪುರೋಹಿತರಾಗಿ ಸೇವೆ ಮಾಡೋದ್ರ ಬಗ್ಗೆನೂ ಇದೆ.+ ಆ ಪುರೋಹಿತರ ಸೇವೆಯಿಂದ ಒಬ್ಬನು ಪರಿಪೂರ್ಣನಾಗೋಕೆ ಆಗೋದಾದ್ರೆ ನಿಜವಾಗ್ಲೂ ಮೆಲ್ಕಿಜೆದೇಕನ ತರದ ಪುರೋಹಿತನ ಅಗತ್ಯ ಇತ್ತಾ?+ ಆರೋನನ ತರ ಇದ್ದ ಪುರೋಹಿತನೇ ಸಾಕಾಗಿತ್ತಲ್ವಾ?