-
ಯೆಹೋಶುವ 1:7, 8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಧೈರ್ಯವಾಗಿರು, ದೃಢವಾಗಿರು. ನನ್ನ ಸೇವಕ ಮೋಶೆ ನಿನಗೆ ಕೊಟ್ಟ ನಿಯಮ ಪುಸ್ತಕಕ್ಕೆ ಗಮನಕೊಡು. ಅದ್ರಲ್ಲಿರೋ ತರ ನಡ್ಕೊ. ಅದ್ರಲ್ಲಿರೋ ಒಂದು ನಿಯಮವನ್ನ ಸಹ ಮೀರಬಾರದು.+ ಆಗ ನೀನು ಎಲ್ಲ ತೀರ್ಮಾನಗಳನ್ನ ವಿವೇಕದಿಂದ ಮಾಡ್ತೀಯ.+ 8 ನೀನು ಈ ನಿಯಮ ಪುಸ್ತಕದಲ್ಲಿ ಇರೋ ವಿಷ್ಯಗಳ ಬಗ್ಗೆ ಮಾತಾಡ್ತಾ ಇರಬೇಕು.+ ಅದ್ರಲ್ಲಿ ಇರೋದನ್ನೆಲ್ಲ ತಪ್ಪದೆ ಪಾಲಿಸೋಕೆ ಅದನ್ನ ಹಗಲುರಾತ್ರಿ ಓದಿ ಧ್ಯಾನಿಸು.*+ ಆಗ ನೀನು ವಿವೇಕದಿಂದ ನಡ್ಕೊಳ್ತೀಯ, ಒಳ್ಳೇ ತೀರ್ಮಾನಗಳನ್ನ ಮಾಡ್ತೀಯ.+
-
-
ಕೀರ್ತನೆ 119:100ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
100 ವಯಸ್ಸಾದವರಿಗಿಂತ ಬುದ್ಧಿವಂತನಾಗಿ ನಾನು ನಡ್ಕೊತೀನಿ,
ಯಾಕಂದ್ರೆ ನಾನು ನಿನ್ನ ಆಜ್ಞೆಗಳನ್ನ ಪಾಲಿಸ್ತೀನಿ.
-