-
ಆದಿಕಾಂಡ 33:4, 5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ಏಸಾವ ಅವನ ಹತ್ರ ಓಡಿ ಬಂದು ಅವನನ್ನ ತಬ್ಬಿಕೊಂಡು ಮುತ್ತಿಟ್ಟ. ಇಬ್ಬರೂ ಜೋರಾಗಿ ಅತ್ರು. 5 ಏಸಾವ ಯಾಕೋಬನ ಹಿಂದೆ ಇದ್ದ ಸ್ತ್ರೀಯರನ್ನ ಮತ್ತು ಮಕ್ಕಳನ್ನ ನೋಡಿ “ಇವರೆಲ್ಲ ಯಾರು?” ಅಂತ ಕೇಳಿದ. ಅದಕ್ಕೆ ಅವನು “ನಿನ್ನ ಸೇವಕನಾದ ನನಗೆ ದೇವರು ದಯೆ ತೋರಿಸಿ ಕೊಟ್ಟ ಮಕ್ಕಳು”+ ಅಂದ.
-
-
ಆದಿಕಾಂಡ 48:3, 4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಆಮೇಲೆ ಯಾಕೋಬ ಯೋಸೇಫನಿಗೆ ಹೀಗಂದ:
“ಸರ್ವಶಕ್ತ ದೇವರು ಕಾನಾನ್ ದೇಶದ ಲೂಜ್ ಪಟ್ಟಣದಲ್ಲಿ ನನಗೆ ಕಾಣಿಸ್ಕೊಂಡು ನನ್ನನ್ನ ಆಶೀರ್ವದಿಸಿದ.+ 4 ಅಲ್ಲದೆ ಆತನು ‘ನಿನ್ನ ವಂಶದವರು ಜಾಸ್ತಿ ಆಗೋ ತರ ಮಾಡ್ತೀನಿ. ನಿನ್ನ ವಂಶದವರಿಂದ ಅನೇಕ ಕುಲ ಹುಟ್ಟೋ ತರ ಮಾಡ್ತೀನಿ. ಅವೆಲ್ಲ ಸೇರಿ ಒಂದು ದೊಡ್ಡ ಸಮೂಹ ಆಗ್ತಾರೆ.+ ಅಲ್ಲದೆ ನಾನು ಈ ದೇಶವನ್ನ ನಿನ್ನ ನಂತ್ರ ಬರೋ ನಿನ್ನ ಸಂತತಿಗೆ ಶಾಶ್ವತವಾದ ಆಸ್ತಿಯಾಗಿ ಕೊಡ್ತೀನಿ’ ಅಂದ.+
-