ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಸಮುವೇಲ 16:6, 7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಹೀಗೆ ಅವರು ಅಲ್ಲಿಗೆ ಬಂದಾಗ ಸಮುವೇಲ ಎಲೀಯಾಬನನ್ನ+ ನೋಡಿ “ಇವನನ್ನೇ ಯೆಹೋವ ಆರಿಸ್ಕೊಂಡಿದ್ದಾನೆ”* ಅಂದ್ಕೊಂಡ. 7 ಆದ್ರೆ ಯೆಹೋವ ಸಮುವೇಲನಿಗೆ “ನಾನು ಅವನನ್ನ ಆರಿಸ್ಕೊಂಡಿಲ್ಲ. ನೀನು ಅವನ ಹೊರತೋರಿಕೆ, ಎತ್ತರ ನೋಡಬೇಡ.+ ಮನುಷ್ಯರು ನೋಡೋ ತರ ದೇವರು ನೋಡಲ್ಲ. ಮನುಷ್ಯರು ಕಣ್ಣಿಗೆ ಕಾಣಿಸೋದನ್ನ ನೋಡ್ತಾರೆ. ಆದ್ರೆ ಯೆಹೋವ ಹೃದಯದಲ್ಲಿ ಇರೋದನ್ನ ನೋಡ್ತಾನೆ”+ ಅಂದನು.

  • 1 ಪೂರ್ವಕಾಲವೃತ್ತಾಂತ 28:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ನನ್ನ ಮಗನಾದ ಸೊಲೊಮೋನ, ನಿನ್ನ ತಂದೆಯ ದೇವರನ್ನ ತಿಳ್ಕೊ. ನಿನ್ನ ಪೂರ್ಣ* ಹೃದಯದಿಂದ,+ ಖುಷಿ ಖುಷಿಯಿಂದ ಆತನ ಸೇವೆ ಮಾಡು. ಯಾಕಂದ್ರೆ ಯೆಹೋವ ಎಲ್ರ ಹೃದಯವನ್ನ ನೋಡ್ತಾನೆ.+ ಮನಸ್ಸಿನ ಒಂದೊಂದು ವಿಷ್ಯಗಳನ್ನ, ಆಸೆಗಳನ್ನ ತಿಳ್ಕೊಂಡಿದ್ದಾನೆ.+ ನೀನು ಆತನನ್ನ ಹುಡುಕಿದ್ರೆ ನಿನಗೆ ಸಿಕ್ತಾನೆ,+ ಸಹಾಯ ಮಾಡ್ತಾನೆ. ಆದ್ರೆ ನೀನು ಅವನನ್ನ ಬಿಟ್ಟುಬಿಟ್ರೆ, ಆತನು ನಿನ್ನನ್ನ ಶಾಶ್ವತವಾಗಿ ಬಿಟ್ಟುಬಿಡ್ತಾನೆ.+

  • ಕೀರ್ತನೆ 17:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ನೀನು ನನ್ನ ಹೃದಯನ ಪರೀಕ್ಷಿಸಿದೆ, ರಾತ್ರಿ ಸಮಯದಲ್ಲೂ ನನ್ನನ್ನ ಪರಿಶೀಲಿಸಿದೆ,+

      ನೀನು ನನ್ನನ್ನ ಪರಿಷ್ಕರಿಸಿದೆ,+

      ನಾನು ಯಾವ ಕೆಟ್ಟ ಸಂಚನ್ನೂ ಮಾಡಿಲ್ಲ ಅಂತ,

      ನನ್ನ ಬಾಯಿ ಯಾವ ಪಾಪವನ್ನೂ ಮಾಡಿಲ್ಲ ಅಂತ ನಿನಗೆ ಗೊತ್ತಾಗುತ್ತೆ.

  • ಕೀರ್ತನೆ 139:23
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 ದೇವರೇ, ನನ್ನನ್ನ ಪರಿಶೋಧಿಸಿ ನನ್ನ ಮನಸ್ಸನ್ನ ತಿಳ್ಕೊ.+

      ನನ್ನನ್ನ ಪರೀಕ್ಷಿಸಿ ನನ್ನ ಚಿಂತೆಗಳನ್ನ* ಅರ್ಥ ಮಾಡ್ಕೊ.+

  • ಯೆರೆಮೀಯ 20:12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ಆದ್ರೆ ಸೈನ್ಯಗಳ ದೇವರಾದ ಯೆಹೋವನೇ, ನೀನು ನೀತಿವಂತರನ್ನ ಪರೀಕ್ಷಿಸ್ತೀಯ,

      ನೀನು ಅಂತರಾಳದ ಯೋಚನೆಗಳನ್ನ* ತಿಳ್ಕೊಳ್ತೀಯ, ಹೃದಯ ನೋಡ್ತೀಯ.+

      ನೀನು ಅವ್ರಿಗೆ ಸೇಡು ತೀರಿಸೋದನ್ನ ನೋಡೋ ಅವಕಾಶ ನನಗೆ ಕೊಡು,+

      ಯಾಕಂದ್ರೆ ನನ್ನ ಮೊಕದ್ದಮೆಯನ್ನ ನಿನ್ನ ಕೈಗೆ ಕೊಟ್ಟಿದ್ದೀನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ