12 ಇಸ್ರಾಯೇಲ್ಯರೇ, ನಿಮ್ಮ ದೇವರಾದ ಯೆಹೋವ ನಿಮ್ಮಿಂದ ಏನು ಕೇಳ್ಕೊಳ್ತಿದ್ದಾನೆ?+ ನಿಮ್ಮ ದೇವರಾದ ಯೆಹೋವನಿಗೆ ಭಯಪಡಬೇಕು,+ ಎಲ್ಲ ವಿಷ್ಯಗಳಲ್ಲಿ ಆತನು ಹೇಳೋ ದಾರೀಲೇ ನಡಿಬೇಕು,+ ಆತನನ್ನ ಪ್ರೀತಿಸಬೇಕು, ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ* ನಿಮ್ಮ ದೇವರಾದ ಯೆಹೋವನ ಸೇವೆ ಮಾಡಬೇಕು,+
16 ಆಗ ಯೆಹೋವನಿಗೆ ಭಯಪಡುವವರು ಮಾತಾಡ್ಕೊಂಡ್ರು. ಪ್ರತಿಯೊಬ್ಬನು ತನ್ನ ಜೊತೆಗಾರನ ಜೊತೆ ಮಾತಾಡ್ಕೊಂಡ. ಯೆಹೋವ ಅದನ್ನ ಗಮನಕೊಟ್ಟು ಕೇಳಿಸ್ಕೊಳ್ತಾ ಇದ್ದನು. ಯೆಹೋವನ ಭಯ ಇರುವವ್ರ ಮತ್ತು ಆತನ ಹೆಸ್ರನ್ನ ಧ್ಯಾನಿಸುವವ್ರ*+ ಹೆಸ್ರುಗಳನ್ನ ದೇವರು ತನ್ನ ಮುಂದೆಯಿದ್ದ ಜ್ಞಾಪಕ ಪುಸ್ತಕದಲ್ಲಿ ಬರೆದಿಡೋಕೆ+ ಆಜ್ಞೆ ಕೊಟ್ಟನು.