-
ಆದಿಕಾಂಡ 20:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಅದಕ್ಕೆ ಸತ್ಯ ದೇವರು ಕನಸಲ್ಲಿ “ನೀನು ಕೆಟ್ಟ ಉದ್ದೇಶದಿಂದ ಇದನ್ನ ಮಾಡಲಿಲ್ಲ ಅಂತ ನಂಗೊತ್ತು. ಹಾಗಾಗಿ ನನ್ನ ವಿರುದ್ಧ ಪಾಪ ಮಾಡದ ಹಾಗೆ ನಾನು ನಿನ್ನನ್ನ ತಡಿದೆ. ಅವಳನ್ನ ಮುಟ್ಟಲು ಬಿಡಲಿಲ್ಲ.
-
-
2 ಪೂರ್ವಕಾಲವೃತ್ತಾಂತ 26:16-18ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ಆದ್ರೆ ಅವನು ಶಕ್ತಿಶಾಲಿ ಆದ್ಮೇಲೆ ಅವನ ಹೃದಯ ಅಹಂಕಾರದಿಂದ ತುಂಬಿಕೊಳ್ತು. ಅದು ಅವನನ್ನ ನಾಶಕ್ಕೆ ನಡೆಸ್ತು. ಅವನು ಧೂಪವೇದಿ ಮೇಲೆ ಧೂಪ ಹಾಕೋಕೆ ಯೆಹೋವನ ಆಲಯದ ಒಳಗೆ ಹೋದ. ಹಾಗೆ ಮಾಡಿ ಅವನು ತನ್ನ ದೇವರಾದ ಯೆಹೋವನಿಗೆ ನಂಬಿಕೆದ್ರೋಹ ಮಾಡಿದ.+ 17 ತಕ್ಷಣ ಪುರೋಹಿತ ಅಜರ್ಯ ಮತ್ತು ಧೈರ್ಯವಂತರಾಗಿದ್ದ ಯೆಹೋವನ ಬೇರೆ 80 ಪುರೋಹಿತರು ಅವನ ಹಿಂದೆನೇ ಹೋದ್ರು. 18 ಅವರು ರಾಜ ಉಜ್ಜೀಯನನ್ನ ತಡೀತಾ ಅವನಿಗೆ “ಉಜ್ಜೀಯನೇ, ಯೆಹೋವನಿಗೆ ಧೂಪ ಹಾಕೋದು ನಿನ್ನ ಕೆಲಸ ಅಲ್ಲ!+ ಅದು ಪುರೋಹಿತರ ಕೆಲಸ. ಅವರು ಮಾತ್ರ ಧೂಪ ಹಾಕಬೇಕು. ಯಾಕಂದ್ರೆ ಅವರು ಆರೋನನ ವಂಶದವರು,+ ದೇವರು ಆರಿಸಿಕೊಂಡವರು. ಹಾಗಾಗಿ ಈ ಪವಿತ್ರ ಸ್ಥಳದಿಂದ ಹೊರಗೆ ಹೋಗು. ನೀನು ನಂಬಿಕೆದ್ರೋಹ ಮಾಡ್ತಿದ್ದೀಯ. ನೀನು ಮಾಡಿದ ಈ ಕೆಲಸಕ್ಕೆ ನಿನ್ನ ದೇವರಾದ ಯೆಹೋವ ನಿನಗೆ ಏನೂ ಒಳ್ಳೇದು ಮಾಡಲ್ಲ” ಅಂದ್ರು.
-