7 ಆದ್ರೆ ಯೆಹೋವನಲ್ಲಿ ನಂಬಿಕೆ ಇಡೋ,
ಯೆಹೋವನಲ್ಲಿ ದೃಢವಿಶ್ವಾಸ ಇಡೋ ಮನುಷ್ಯ ಆಶೀರ್ವಾದ ಪಡಿತಾನೆ.+
8 ಅವನು ನದಿ ಹತ್ರ ನೆಟ್ಟಿರೋ,
ತನ್ನ ಬೇರುಗಳನ್ನ ನೀರಿನ ತನಕ ಹರಡ್ಕೊಂಡಿರೋ ಮರದ ಹಾಗೆ ಆಗ್ತಾನೆ.
ಆ ಮರ ಸುಡು ಬಿಸಿಲನ್ನ ಲೆಕ್ಕಿಸಲ್ಲ,
ಅದ್ರ ಎಲೆಗಳು ಯಾವಾಗ್ಲೂ ಹಚ್ಚಹಸುರಾಗಿ ಇರುತ್ತೆ.+
ಬರಗಾಲದಲ್ಲಿ ತಲೆ ಕೆಡಿಸ್ಕೊಳ್ಳಲ್ಲ,
ಹಣ್ಣು ಕೊಡೋದನ್ನ ನಿಲ್ಲಿಸಲ್ಲ.
ಆ ಮರದ ತರ ಅವನು ಇರ್ತಾನೆ.