-
ಧರ್ಮೋಪದೇಶಕಾಂಡ 6:1, 2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ನಾನು ಮುಂದೆ ಹೇಳೋ ಆಜ್ಞೆ, ನಿಯಮ, ತೀರ್ಪುಗಳನ್ನ ನಿಮಗೆ ಕಲಿಸಬೇಕಂತ ನಿಮ್ಮ ದೇವರಾದ ಯೆಹೋವ ನನಗೆ ಹೇಳಿದ್ದಾನೆ. ನೀವು ಯೋರ್ದನ್ ದಾಟಿ ವಶ ಮಾಡ್ಕೊಳ್ಳೋ ದೇಶದಲ್ಲಿ ಇದನ್ನೆಲ್ಲ ಪಾಲಿಸಬೇಕು. 2 ನೀವು, ನಿಮ್ಮ ಮಕ್ಕಳು, ಮೊಮ್ಮಕ್ಕಳು ನಿಮ್ಮ ದೇವರಾದ ಯೆಹೋವನಿಗೆ ಭಯಪಡಬೇಕು.+ ನೀವು ಜೀವನಪೂರ್ತಿ ಆತನ ನಿಯಮಗಳನ್ನ, ಆಜ್ಞೆಗಳನ್ನ ಪಾಲಿಸಬೇಕು. ಆಗ ಜಾಸ್ತಿ ವರ್ಷ ಬದುಕ್ತೀರ.+
-
-
ಧರ್ಮೋಪದೇಶಕಾಂಡ 30:19, 20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
19 ಜೀವ ಅಥವಾ ಮರಣ, ಆಶೀರ್ವಾದ ಅಥವಾ ಶಾಪ ಆಯ್ಕೆ ಮಾಡೋ ಅವಕಾಶ ಇವತ್ತು ನಿಮ್ಮ ಮುಂದೆ ಇಟ್ಟಿದ್ದೀನಿ.+ ನೀವೇನು ಮಾಡ್ತಿರೋ ಅದಕ್ಕೆ ಭೂಮಿ, ಆಕಾಶನೇ ಸಾಕ್ಷಿ. ನೀವು, ನಿಮ್ಮ ವಂಶದವರು+ ಬದುಕಿ ಬಾಳೋ ತರ ಜೀವವನ್ನೇ ಆರಿಸ್ಕೊಳ್ಳಿ.+ 20 ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸಬೇಕು,+ ಆತನ ಮಾತು ಕೇಳಬೇಕು, ಆತನಿಗೆ ಯಾವಾಗ್ಲೂ ನಿಷ್ಠೆಯಿಂದ ಇರಬೇಕು.+ ಯಾಕಂದ್ರೆ ನಿಮಗೆ ಜೀವ ಕೊಡೋನು, ನಿಮ್ಮ ಪೂರ್ವಜರಾದ ಅಬ್ರಹಾಮ, ಇಸಾಕ, ಯಾಕೋಬರಿಗೆ ಕೊಡ್ತೀನಿ+ ಅಂತ ಮಾತು ಕೊಟ್ಟ ದೇಶದಲ್ಲಿ ನಿಮ್ಮನ್ನ ತುಂಬ ವರ್ಷ ಬದುಕೋ ತರ ಮಾಡೋನು ಯೆಹೋವನೇ.”
-
-
1 ಪೇತ್ರ 3:10-12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಯಾಕಂದ್ರೆ ಒಂದು ವಚನದಲ್ಲಿ ಹೀಗೆ ಹೇಳುತ್ತೆ: “ಚೆನ್ನಾಗಿ ಜೀವನ ಮಾಡ್ತಾ ಖುಷಿಯಾಗಿ ಇರಬೇಕಂತ ಅಂದ್ಕೊಳ್ಳುವವರು ಕೆಟ್ಟದ್ದನ್ನ ಮಾತಾಡದೆ, ಮೋಸ ಮಾಡದೆ ತಮ್ಮ ನಾಲಿಗೆಯನ್ನ ಹತೋಟಿಯಲ್ಲಿ ಇಟ್ಕೊಬೇಕು.+ 11 ಅಂಥವರು ಕೆಟ್ಟದ್ರಿಂದ+ ದೂರ ಇದ್ದು, ಒಳ್ಳೇದನ್ನ ಮಾಡಬೇಕು.+ ಶಾಂತಿಯನ್ನ ಹುಡುಕಿ ಅದನ್ನ ಪಡ್ಕೊಳ್ಳೋಕೆ ತುಂಬ ಪ್ರಯತ್ನ ಮಾಡಬೇಕು.+ 12 ಯಾಕಂದ್ರೆ ಯೆಹೋವನ* ಕಣ್ಣುಗಳು ನೀತಿವಂತರ ಮೇಲಿವೆ, ಸಹಾಯಕ್ಕಾಗಿ ಅವರು ಕೂಗಿದಾಗ ಆತನ ಕಿವಿ ಅದನ್ನ ಕೇಳಿಸ್ಕೊಳ್ಳುತ್ತೆ.+ ಆದ್ರೆ ಕೆಟ್ಟ ಕೆಲಸ ಮಾಡುವವ್ರನ್ನ ಕಂಡ್ರೆ ಯೆಹೋವನಿಗೆ* ಇಷ್ಟ ಇಲ್ಲ.”+
-