14 ಆ ಹತ್ತು ರಾಜರು ಕುರಿಮರಿ+ ಜೊತೆ ಯುದ್ಧ ಮಾಡ್ತಾರೆ. ಆದ್ರೆ ಆ ಕುರಿಮರಿ ಒಡೆಯರ ಒಡೆಯನೂ, ರಾಜರ ರಾಜನೂ+ ಆಗಿರೋದ್ರಿಂದ ಅವ್ರನ್ನ ಸೋಲಿಸ್ತಾನೆ.+ ಅಷ್ಟೇ ಅಲ್ಲ, ದೇವರು ಯಾರನ್ನ ಕರೆದಿದ್ದಾನೋ ಯಾರನ್ನ ಆರಿಸ್ಕೊಂಡಿದ್ದಾನೋ ದೇವರಿಗೆ ಯಾರು ನಂಬಿಗಸ್ತರಾಗಿ ಇದ್ದಾರೋ ಅವರೂ ಕುರಿಮರಿ ಜೊತೆ ಗೆಲ್ತಾರೆ.”+
19 ಕಾಡುಪ್ರಾಣಿ, ಭೂಮಿಯ ರಾಜರು ಮತ್ತು ಅವ್ರ ಸೈನಿಕರು ಸೇರಿಬಂದಿರೋದನ್ನ ನಾನು ನೋಡಿದೆ. ಕುದುರೆ ಮೇಲೆ ಕೂತಿದ್ದವನ ಮತ್ತು ಅವನ ಸೈನ್ಯದ ವಿರುದ್ಧ ಯುದ್ಧ ಮಾಡೋಕೆ ಅವ್ರೆಲ್ಲ ಬಂದಿದ್ರು.+