-
ಅ. ಕಾರ್ಯ 4:25-28ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
25 ಪವಿತ್ರಶಕ್ತಿಯ ಸಹಾಯದಿಂದ ನಿನ್ನ ಸೇವಕನೂ ನಮ್ಮ ಪೂರ್ವಜನೂ ಆದ ದಾವೀದನ+ ಬಾಯಲ್ಲಿ ನೀನೇ ಈ ಮಾತನ್ನ ಹೇಳಿಸಿದ್ದಿಯ. ಅದೇನಂದ್ರೆ ‘ದೇಶಗಳು ಯಾಕಷ್ಟು ಕೋಪ ಮಾಡ್ಕೊಂಡಿವೆ? ಜನ ಯಾಕೆ ಪೊಳ್ಳು ವಿಷ್ಯಗಳ ಬಗ್ಗೆ ಯೋಚಿಸ್ತಿದ್ದಾರೆ? 26 ರಾಜರು ಯೆಹೋವನ* ಮತ್ತು ಆತನ ಅಭಿಷಿಕ್ತನ ವಿರುದ್ಧ ನಿಂತಿದ್ದಾರೆ, ನಾಯಕರು ಅವ್ರ ವಿರುದ್ಧ ಒಟ್ಟುಸೇರಿದ್ದಾರೆ.’+ 27 ಆ ಮಾತು ನಿಜ ಆಗಿದೆ. ಹೆರೋದ ಮತ್ತು ಪೊಂತ್ಯ ಪಿಲಾತ+ ಯೆಹೂದ್ಯರಲ್ಲದ ಜನ್ರ ಜೊತೆ, ಇಸ್ರಾಯೇಲ್ಯರ ಜೊತೆ ಸೇರಿ ನೀನು ಅಭಿಷೇಕಿಸಿದ+ ನಿನ್ನ ಪವಿತ್ರ ಸೇವಕ ಯೇಸುವಿನ ವಿರುದ್ಧ ನಿಂತಿದ್ದಾರೆ. 28 ನಿನ್ನ ಶಕ್ತಿ ಮತ್ತು ಉದ್ದೇಶಕ್ಕೆ ತಕ್ಕಂತೆ ಮೊದಲೇ ನೀನು ಏನು ಹೇಳಿದ್ದಿಯೋ ಅದನ್ನೇ ಅವರು ಮಾಡಬೇಕಂತ ಈಗ ತಯಾರಾಗಿದ್ದಾರೆ.+
-