37 ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನ ನೀನು ಸಾಯಿಸಿದೆ. ನಿನ್ನ ಹತ್ರ ಕಳಿಸಿದವ್ರನ್ನ ಕಲ್ಲೆಸೆದು ಕೊಂದೆ.+ ಕೋಳಿ ತನ್ನ ರೆಕ್ಕೆ ಕೆಳಗೆ ಮರಿಗಳನ್ನ ಸೇರಿಸ್ಕೊಳ್ಳೋ ತರ ನಿನ್ನ ಮಕ್ಕಳನ್ನ ತುಂಬ ಸಲ ಸೇರಿಸ್ಕೊಳ್ಳೋಕೆ ನಾನು ಇಷ್ಟಪಟ್ಟೆ. ಆದ್ರೆ ನಿನಗಿಷ್ಟ ಇರಲಿಲ್ಲ.+
51 “ಮೊಂಡ ಜನ್ರೇ, ನೀವು ನಿಮ್ಮ ಕಿವಿಗಳನ್ನ ಮುಚ್ಕೊಂಡು ಬಿಟ್ಟಿದ್ದೀರ. ನಿಮ್ಮ ಆಲೋಚನೆಯನ್ನ ಬದಲಾಯಿಸ್ಕೊಳ್ಳೋಕೆ ತಯಾರಿಲ್ಲ. ನೀವು ಯಾವಾಗ್ಲೂ ಪವಿತ್ರಶಕ್ತಿಯನ್ನ ವಿರೋಧಿಸ್ತೀರ. ನಿಮ್ಮ ಪೂರ್ವಜರೂ ಅದನ್ನೇ ಮಾಡಿದ್ರು.+