9 ಹಾಗಾಗಿ ಇಸ್ರಾಯೇಲಿನ ದೇವರೂ ಸೈನ್ಯಗಳ ದೇವರೂ ಆದ ಯೆಹೋವ ಹೀಗೆ ಹೇಳ್ತಿದ್ದಾನೆ:
“ನನ್ನಾಣೆ, ಮೋವಾಬ್ ಸೊದೋಮ್ ತರ ಆಗುತ್ತೆ,+
ಅಮ್ಮೋನ್ ಗೊಮೋರದ ತರ ಆಗುತ್ತೆ.+
ಅವ್ರ ಪ್ರದೇಶಗಳು ಮುಳ್ಳುಗಿಡಗಳಿಂದ ಉಪ್ಪಿನ ತಗ್ಗಿಂದ ತುಂಬ್ಕೊಂಡು ಶಾಶ್ವತವಾಗಿ ಹಾಳಾಗುತ್ತೆ.+
ನನ್ನ ಜನ್ರಲ್ಲಿ ಉಳಿದವರು ಅವ್ರನ್ನ ಕೊಳ್ಳೆ ಹೊಡಿತಾರೆ,
ನನ್ನ ಜನಾಂಗದಲ್ಲಿ ಉಳಿದವರು ಅವ್ರನ್ನ ಓಡಿಸಿಬಿಡ್ತಾರೆ.