24ಯೆಹೋಯಾಕೀಮನ ಕಾಲದಲ್ಲಿ ಬಾಬೆಲಿನ ರಾಜ ನೆಬೂಕದ್ನೆಚ್ಚರ+ ಯೆಹೂದದ ಮೇಲೆ ದಾಳಿ ಮಾಡಿದ. ಯೆಹೋಯಾಕೀಮ ಮೂರು ವರ್ಷ ಅವನ ಅಧೀನದಲ್ಲಿದ್ದ. ಆಮೇಲೆ ಅವನು ನೆಬೂಕದ್ನೆಚ್ಚರನ ವಿರುದ್ಧ ತಿರುಗಿಬಿದ್ದ.
4 ಅಷ್ಟೇ ಅಲ್ಲ ಈಜಿಪ್ಟಿನ ರಾಜ ಯೆಹೋವಾಹಾಜನ ಸಹೋದರ ಎಲ್ಯಕೀಮನನ್ನ ಯೆಹೂದ ಮತ್ತು ಯೆರೂಸಲೇಮಿನ ಮೇಲೆ ರಾಜನನ್ನಾಗಿ ಮಾಡಿದ. ಎಲ್ಯಕೀಮನ ಹೆಸ್ರನ್ನ ಯೆಹೋಯಾಕೀಮ್ ಅಂತ ಬದಲಾಯಿಸಿದ. ಆದ್ರೆ ನೆಕೋ+ ಯೆಹೋಯಾಕೀಮನ ಸಹೋದರ ಯೆಹೋವಾಹಾಜನನ್ನ ಈಜಿಪ್ಟಿಗೆ ಕರ್ಕೊಂಡು ಬಂದ.+