ಕೀರ್ತನೆ
ಕೋರಹನ ಮಕ್ಕಳ+ ಮಧುರ ಗೀತೆ.
87 ದೇವರ ಪಟ್ಟಣದ ಅಸ್ತಿವಾರ ಪವಿತ್ರ ಬೆಟ್ಟಗಳಲ್ಲಿ ಇದೆ.+
2 ಯಾಕೋಬನ ಎಲ್ಲ ಡೇರೆಗಳಿಗಿಂತ
ಚೀಯೋನಿನ ಬಾಗಿಲುಗಳನ್ನ ಯೆಹೋವ ಪ್ರೀತಿಸ್ತಾನೆ.+
3 ಸತ್ಯ ದೇವರ ಪಟ್ಟಣವೇ, ನಿನ್ನ ಬಗ್ಗೆ ಒಳ್ಳೇ ವಿಷ್ಯಗಳನ್ನ ಹೇಳ್ತಿದ್ದಾರೆ.+ (ಸೆಲಾ)
4 ರಾಹಾಬ*+ ಮತ್ತು ಬಾಬೆಲನ್ನ ನನ್ನ ಬಗ್ಗೆ ಗೊತ್ತಿರೋರು* ಅಂದ್ಕೊಳ್ತೀನಿ,
ನೋಡಿ! ಫಿಲಿಷ್ಟಿಯ ಮತ್ತು ತೂರ್ ಕೂಷಿನ ಜೊತೆ ಇವೆ.
ನಾನು ಇವ್ರಲ್ಲಿ ಎಲ್ರ ಬಗ್ಗೆ “ಇವರು ಚೀಯೋನಿನಲ್ಲಿ ಹುಟ್ಟಿದರು” ಅಂತ ಹೇಳ್ತೀನಿ.
5 ಚೀಯೋನಿನ ಬಗ್ಗೆ ನಾನು
“ಪ್ರತಿಯೊಬ್ರೂ ಇಲ್ಲೇ ಹುಟ್ಟಿದ್ರು” ಅಂತ ಹೇಳ್ತೀನಿ.
ಸರ್ವೋನ್ನತ ಅವಳನ್ನ ದೃಢವಾಗಿ ಸ್ಥಾಪಿಸ್ತಾನೆ.
6 ಜನ್ರ ಹೆಸ್ರನ್ನ ದಾಖಲಿಸುವಾಗ ಯೆಹೋವ,
“ಇವನು ಅಲ್ಲೇ ಹುಟ್ಟಿದ” ಅಂತ ಹೇಳ್ತಾನೆ. (ಸೆಲಾ)