ಪರಿವಿಡಿ
ಡಿಸೆಂಬರ್ 31, 2018–ಜನವರಿ 6ರ ವಾರ, 2019
3 ಸತ್ಯವನ್ನು ಕೊಂಡುಕೊಳ್ಳಿ, ಮಾರಿಬಿಡಬೇಡಿ
ಜನವರಿ 7-13ರ ವಾರ, 2019
ಬೈಬಲಲ್ಲಿರುವ ಸತ್ಯದ ಮೇಲೆ ನಮ್ಮ ಪ್ರೀತಿಯನ್ನು ಇನ್ನೂ ಹೆಚ್ಚಿಸಲು ಈ ಎರಡು ಲೇಖನಗಳು ಸಹಾಯ ಮಾಡುತ್ತವೆ. ಸತ್ಯಕ್ಕಾಗಿ ನಾವು ಏನೇ ಬಿಟ್ಟುಕೊಟ್ಟಿದ್ದರೂ ಅದು ಇದರ ಮುಂದೆ ಏನೇನೂ ಅಲ್ಲ. ಸತ್ಯವನ್ನು ಯಾವಾಗಲೂ ಅಮೂಲ್ಯವಾಗಿ ನೋಡಲು ಯಾವುದು ಸಹಾಯ ಮಾಡುತ್ತದೆ ಎಂದು ನಾವು ಕಲಿಯಲಿದ್ದೇವೆ. ಸತ್ಯವನ್ನು ಯಾವತ್ತಿಗೂ ಮಾರಿಬಿಡದಿರಲು ಸಹ ನಮಗೆ ಈ ಲೇಖನಗಳು ಪ್ರೋತ್ಸಾಹಿಸುತ್ತವೆ.
ಜನವರಿ 14-20ರ ವಾರ, 2019
13 ಯೆಹೋವನನ್ನು ನಂಬಿ, ಸದಾಕಾಲ ಬಾಳಿ!
ನಾವು ಕಷ್ಟಗಳನ್ನು ಅನುಭವಿಸುವಾಗಲೂ ಯೆಹೋವನಲ್ಲಿ ಇಟ್ಟಿರುವ ಭರವಸೆಯನ್ನು ಕಳಕೊಳ್ಳದೇ ಇರುವುದು ಹೇಗೆಂದು ಹಬಕ್ಕೂಕ ಪುಸ್ತಕ ತೋರಿಸುತ್ತದೆ. ನಮ್ಮ ಚಿಂತೆಗಳು, ಕಷ್ಟಗಳು ಮತ್ತು ನೋವು ಹೆಚ್ಚಾದಾಗಲೂ ನಾವು ದೇವರಲ್ಲಿ ಭರವಸೆ ಇಡುವುದರಿಂದ ಆತನು ನಮ್ಮನ್ನು ಖಂಡಿತ ಕಾಪಾಡುತ್ತಾನೆ ಎಂದು ಗ್ರಹಿಸಲು ಈ ಲೇಖನ ಸಹಾಯ ಮಾಡುತ್ತದೆ.
ಜನವರಿ 21-27ರ ವಾರ, 2019
18 ನೀವು ಯಾರ ತರ ಯೋಚನೆ ಮಾಡುತ್ತೀರಾ?
ಜನವರಿ 28, 2019–ಫೆಬ್ರವರಿ 3ರ ವಾರ, 2019
23 ನೀವು ಯೆಹೋವನ ತರ ಯೋಚನೆ ಮಾಡುತ್ತೀರಾ?
ನಾವು ಯೆಹೋವನಿಗೆ ಹತ್ತಿರವಾಗುತ್ತಾ ಇದ್ದರೆ ಆತನ ಯೋಚನೆ ನಮ್ಮ ಯೋಚನೆಗಿಂತ ಎಷ್ಟೋ ಉನ್ನತವಾದದ್ದು ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನಾವು ಲೋಕದವರ ತರ ಯೋಚನೆ ಮಾಡದಿರಲು ಏನು ಮಾಡಬೇಕು ಮತ್ತು ನಾವು ಆದಷ್ಟು ಹೆಚ್ಚು ಯೆಹೋವನ ತರ ಹೇಗೆ ಯೋಚನೆ ಮಾಡಬಹುದು ಅನ್ನುವುದನ್ನು ಈ ಎರಡು ಲೇಖನಗಳು ವಿವರಿಸುತ್ತವೆ.