ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 12/95 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 1995 ನಮ್ಮ ರಾಜ್ಯದ ಸೇವೆ
1995 ನಮ್ಮ ರಾಜ್ಯದ ಸೇವೆ
km 12/95 ಪು. 7

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆಗಳು

ಡಿಸೆಂಬರ್‌: ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಪುಸ್ತಕ ರೂ. 45ರ ಕಾಣಿಕೆಗೆ. ಪರ್ಯಾಯವಾಗಿ, ಅದೇ ಕಾಣಿಕೆಗೆ, ಬೈಬಲ್‌ ಕಥೆಗಳ ನನ್ನ ಪುಸ್ತಕ (ಇಂಗ್ಲಿಷ್‌) ಅಥವಾ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವು (ಸದಾ ಜೀವಿಸಬಲ್ಲಿರಿ ಪುಸ್ತಕದ ಚಿಕ್ಕ ಸೈಸ್‌ ರೂ. 25 ಆಗಿದೆ) ನೀಡಲ್ಪಡಸಾಧ್ಯವಿದೆ.

ಜನವರಿ: ನಮ್ಮ ರಾಜ್ಯದ ಸೇವೆಯಲ್ಲಿ ವಿಶೇಷ ನೀಡುವಿಕೆಯ ಪುಸ್ತಕಗಳೆಂದು ಈ ಮುಂಚೆ ಪಟ್ಟಿಮಾಡಲ್ಪಟ್ಟಿರುವ ಯಾವುದೇ 192 ಪುಟಗಳ ಪುಸ್ತಕಗಳನ್ನು ರೂ. 8ರ ಕಾಣಿಕೆಗೆ ನೀಡಬಹುದು. ಈ ವಿಭಾಗದಲ್ಲಿರುವ ಮುಂದಿನ ಪುಸ್ತಕಗಳು ನಮ್ಮಲ್ಲಿ ಲಭ್ಯವಿವೆ: ಇಂಗ್ಲಿಷ್‌: ಮಾನವನು ಇಲ್ಲಿ ವಿಕಾಸದ ಮೂಲಕ ಬಂದನೋ, ಸೃಷ್ಟಿಯ ಮೂಲಕವೋ? ಮತ್ತು ಇರುವುದು ಈ ಜೀವಿತ ಮಾತ್ರವೋ? ಕನ್ನಡ: “ನಿನ್ನ ರಾಜ್ಯವು ಬರಲಿ” ಮತ್ತು “ದೇವರು ಸುಳ್ಳಾಡ ಸಾಧ್ಯವಿರದ ವಿಷಯಗಳು;” ಗುಜರಾಥಿ: ನಿಮ್ಮನ್ನು ಸಂತೋಷಪಡಿಸಲಿಕ್ಕೆ ಸುವಾರ್ತೆಯು, “ನಿನ್ನ ರಾಜ್ಯವು ಬರಲಿ,” ಮತ್ತು ನಿತ್ಯ ಜೀವಕ್ಕೆ ನಡಿಸುವ ಸತ್ಯವು; ತಮಿಳು: ಇರುವುದು ಈ ಜೀವಿತ ಮಾತ್ರವೋ? ಮತ್ತು “ನಿನ್ನ ರಾಜ್ಯವು ಬರಲಿ;” ತೆಲುಗು: ಇರುವುದು ಈ ಜೀವಿತ ಮಾತ್ರವೋ? ಮತ್ತು ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು; ಮರಾಠಿ: “ನಿನ್ನ ರಾಜ್ಯವು ಬರಲಿ” ಮತ್ತು ಮಹಾ ಬೋಧಕನಿಗೆ ಕಿವಿಗೊಡುವುದು; ಹಿಂದಿ: ನಿಮ್ಮನ್ನು ಸಂತೋಷಪಡಿಸಲಿಕ್ಕೆ ಸುವಾರ್ತೆಯು ಮತ್ತು “ನಿನ್ನ ರಾಜ್ಯವು ಬರಲಿ.” ಬಂಗಾಲಿ ಅಥವಾ ಪಂಜಾಬಿ ತಿಳಿದಿರುವ ವ್ಯಕ್ತಿಗಳಿಗೆ ನಮ್ಮ ಸಮಸ್ಯೆಗಳು ಅಥವಾ “ಇಗೋ!” ಬ್ರೋಷರನ್ನು ನೀಡಸಾಧ್ಯವಿದೆ, ಮತ್ತು ನೇಪಾಲಿ ಓದುವವರಿಗೆ ಸದಾ ಜೀವನವನ್ನು ಆನಂದಿಸಿರಿ ಬ್ರೋಷರನ್ನು ನೀಡಸಾಧ್ಯವಿದೆ. ಮಲೆಯಾಳಂ ಇಷ್ಟಪಡುವ ವ್ಯಕ್ತಿಗಳಿಗೆ ನಿಮ್ಮ ಯೌವನ—ಅದರಿಂದ ಅತ್ಯುತ್ತಮವಾದುದನ್ನು ಪಡೆಯುವುದು! ಎಂಬ ಪುಸ್ತಕವನ್ನು ರೂ. 15ರ ಕಾಣಿಕೆಗೆ ನೀಡಸಾಧ್ಯವಿದೆ. ಈ ಪುಸ್ತಕವು ವಿಶೇಷ ದರದಲ್ಲಿ ನೀಡಲ್ಪಡಬಾರದೆಂಬುದನ್ನು ದಯವಿಟ್ಟು ಗಮನಿಸಿರಿ.

ಫೆಬ್ರವರಿ: ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಪುಸ್ತಕ ರೂ. 50ರ ಕಾಣಿಕೆಗೆ. ಪರ್ಯಾಯವಾಗಿ, ನಮ್ಮ ರಾಜ್ಯದ ಸೇವೆಯಲ್ಲಿ ವಿಶೇಷ ನೀಡುವಿಕೆಯ ಪುಸ್ತಕಗಳೆಂದು ಈ ಮುಂಚೆ ಪಟ್ಟಿಮಾಡಲ್ಪಟ್ಟಿರುವ ಯಾವುದೇ 192 ಪುಟಗಳ ಪುಸ್ತಕಗಳನ್ನು ರೂ. 8ರ ಕಾಣಿಕೆಗೆ ನೀಡಬಹುದು.

ಮಾರ್ಚ್‌: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕ ರೂ. 25ರ ಕಾಣಿಕೆಗೆ (ದೊಡ್ಡ ಸೈಸ್‌ ರೂ. 45ಕ್ಕೆ).

ಸೂಚನೆ: ಮೇಲೆ ತಿಳಿಸಲ್ಪಟ್ಟ ಯಾವುದೇ ಕ್ಯಾಂಪೇನ್‌ ಐಟಮ್‌ಗಳನ್ನು ಇನ್ನೂ ವಿನಂತಿಸಿರದ ಸಭೆಗಳು ತಮ್ಮ ಮುಂದಿನ ಲಿಟರೇಚರ್‌ ರಿಕ್ವೆಸ್ಟ್‌ ಫಾರ್ಮ್‌ನಲ್ಲಿ (S-AB-14) ಹಾಗೆ ಮಾಡತಕ್ಕದ್ದು.

◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನೇಮಿಸಲ್ಪಟ್ಟ ಯಾರಾದರೊಬ್ಬರು ಸಭಾ ಅಕೌಂಟ್ಸನ್ನು ಡಿಸೆಂಬರ್‌ 1 ಅಥವಾ ಅನಂತರ ಸಾಧ್ಯವಾದಷ್ಟು ಬೇಗನೇ ಲೆಕ್ಕ ತಪಾಸಣೆ ಮಾಡಬೇಕು. ಇದನ್ನು ಮಾಡಿದ ಅನಂತರ ಸಭೆಗೆ ಪ್ರಕಟನೆಯನ್ನು ಮಾಡಿರಿ.

◼ 1996ಕ್ಕಾಗಿರುವ ವರ್ಷವಚನವು: “ವಾಕ್ಯದ ಪ್ರಕಾರ ನಡೆಯುವವರಾಗಿರಿ.”—ಯಾಕೋಬ 1:22. ಜನವರಿ 1, 1996ರಂದು ಅಥವಾ ಸಾಧ್ಯವಾದಷ್ಟು ಬೇಗನೆ ಪ್ರದರ್ಶಿಸಲು ಸಾಧ್ಯವಾಗುವಂತೆ, ಸಭೆಗಳು ಹೊಸ ವರ್ಷವಚನದೊಂದಿಗೆ ತಮ್ಮ ಬೋರ್ಡ್‌ಗಳನ್ನು ಸಿದ್ಧಪಡಿಸುವುದಾದರೆ ಒಳ್ಳೆಯದಾಗಿರುವುದು.

◼ ಸೇವಾ ಫಾರ್ಮ್‌ಗಳ ಒಂದು ವರ್ಷದ ಸರಬರಾಯಿಯು ಎಲ್ಲಾ ಸಭೆಗಳಿಗೆ ಕಳುಹಿಸಲ್ಪಟ್ಟಿದೆ. ಸೂಕ್ತವಾದ ಫಾರ್ಮ್‌ಗಳನ್ನು ಸಂಬಂಧಪಟ್ಟ ಸಹೋದರರಿಗೆ ಹಂಚುವಂತೆ ಎಲ್ಲಾ ಸಭಾ ಸೆಕ್ರಿಟರಿಗಳಿಗೆ ನೆರವನ್ನೀಯಲಿಕ್ಕಾಗಿ, ಈ ಫಾರ್ಮ್‌ಗಳೊಂದಿಗೆ ಒಂದು ಚೆಕ್‌ಲಿಸ್ಟನ್ನು ಒಳಸೇರಿಸಲಾಗಿದೆ. ಈ ಫಾರ್ಮ್‌ಗಳನ್ನು ಅವುಗಳ ಗೊತ್ತುಮಾಡಲ್ಪಟ್ಟ ಉದ್ದೇಶಕ್ಕಾಗಿ ಮಾತ್ರವೇ ಉಪಯೋಗಿಸತಕ್ಕದ್ದು, ಅವುಗಳನ್ನು ಹಾಳುಮಾಡಬಾರದು. ಕಟ್ಟು ಸಿಕ್ಕಿದ ಒಡನೆಯೇ ದಯವಿಟ್ಟು ಫಾರ್ಮ್‌ಗಳ ಎಣಿಕೆ ಮಾಡಿರಿ ಮತ್ತು ಅವು ಮುಂದಿನ ವರ್ಷದ ವರೆಗೆ ಸಾಕಾಗುವಷ್ಟು ಇವೆಯೋ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ಹೆಚ್ಚಿನ ಫಾರ್ಮ್‌ಗಳ ಅಗತ್ಯವಿರುವಲ್ಲಿ, ಅವನ್ನು ಜನವರಿಯಲ್ಲೇ ಆರ್ಡರ್‌ ಮಾಡತಕ್ಕದ್ದು. ದಯವಿಟ್ಟು ಡಿಸೆಂಬರ್‌ 1996ರ ವರೆಗೆ ಸಾಕಾಗುವಷ್ಟು ಫಾರ್ಮ್‌ಗಳನ್ನು ಮಾತ್ರ ಆರ್ಡರ್‌ ಮಾಡಿ.

◼ ಪುನಃ ದೊರೆಯುವ ಪ್ರಕಾಶನಗಳು:

ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?—ಮಲೆಯಾಳಂ

ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?—ಮಲೆಯಾಳಂ

ನೀವು ಬೈಬಲನ್ನು ನಂಬಶಕ್ತರೇಕೆಂಬುದಕ್ಕೆ ಕಾರಣ (ಟ್ರ್ಯಾಕ್ಟ್‌ ನಂಬ್ರ 13)—ತಮಿಳು

ಸತ್ತ ಪ್ರಿಯ ಜನರಿಗಾಗಿ ನಿರೀಕ್ಷೆ ಏನು? (ಟ್ರ್ಯಾಕ್ಟ್‌ ನಂಬ್ರ 16)—ಇಂಗ್ಲಿಷ್‌, ಮಲೆಯಾಳಂ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ