ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/96 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 1996 ನಮ್ಮ ರಾಜ್ಯದ ಸೇವೆ
1996 ನಮ್ಮ ರಾಜ್ಯದ ಸೇವೆ
km 1/96 ಪು. 7

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆಗಳು

ಜನವರಿ: ನಮ್ಮ ರಾಜ್ಯದ ಸೇವೆಯಲ್ಲಿ ವಿಶೇಷ ನೀಡುವಿಕೆಯ ಪುಸ್ತಕಗಳೆಂದು ಈ ಮುಂಚೆ ಪಟ್ಟಿಮಾಡಲ್ಪಟ್ಟಿರುವ ಯಾವುದೇ 192 ಪುಟಗಳ ಪುಸ್ತಕಗಳನ್ನು ರೂ. 8.00ರ ಕಾಣಿಕೆಗೆ ನೀಡಬಹುದು. ಈ ವಿಭಾಗದಲ್ಲಿರುವ ಮುಂದಿನ ಪುಸ್ತಕಗಳು ನಮ್ಮಲ್ಲಿ ಲಭ್ಯವಿವೆ: ಇಂಗ್ಲಿಷ್‌: ಮಾನವನು ಇಲ್ಲಿ ವಿಕಾಸದ ಮೂಲಕ ಬಂದನೋ, ಸೃಷ್ಟಿಯ ಮೂಲಕವೋ? ಮತ್ತು ಇರುವುದು ಈ ಜೀವಿತ ಮಾತ್ರವೋ? ಕನ್ನಡ: “ನಿನ್ನ ರಾಜ್ಯವು ಬರಲಿ” ಮತ್ತು “ದೇವರು ಸುಳ್ಳಾಡ ಸಾಧ್ಯವಿರದ ವಿಷಯಗಳು;” ಗುಜರಾಥಿ: ನಿಮ್ಮನ್ನು ಸಂತೋಷಪಡಿಸಲಿಕ್ಕೆ ಸುವಾರ್ತೆಯು, “ನಿನ್ನ ರಾಜ್ಯವು ಬರಲಿ,” ಮತ್ತು ನಿತ್ಯ ಜೀವಕ್ಕೆ ನಡಿಸುವ ಸತ್ಯವು; ತಮಿಳು: ಇರುವುದು ಈ ಜೀವಿತ ಮಾತ್ರವೋ? ಮತ್ತು “ನಿನ್ನ ರಾಜ್ಯವು ಬರಲಿ;” ತೆಲುಗು: ಇರುವುದು ಈ ಜೀವಿತ ಮಾತ್ರವೋ? ಮತ್ತು ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು; ಮರಾಠಿ: “ನಿನ್ನ ರಾಜ್ಯವು ಬರಲಿ” ಮತ್ತು ಮಹಾ ಬೋಧಕನಿಗೆ ಕಿವಿಗೊಡುವುದು; ಹಿಂದಿ: ನಿಮ್ಮನ್ನು ಸಂತೋಷಪಡಿಸಲಿಕ್ಕೆ ಸುವಾರ್ತೆಯು ಮತ್ತು “ನಿನ್ನ ರಾಜ್ಯವು ಬರಲಿ.” ಬಂಗಾಲಿ ಅಥವಾ ಪಂಜಾಬಿ ತಿಳಿದಿರುವ ವ್ಯಕ್ತಿಗಳಿಗೆ ನಮ್ಮ ಸಮಸ್ಯೆಗಳು ಅಥವಾ “ಇಗೋ!” ಬ್ರೋಷರನ್ನು ನೀಡಸಾಧ್ಯವಿದೆ, ಮತ್ತು ನೇಪಾಲಿ ಓದುವವರಿಗೆ ಸದಾಜೀವನವನ್ನು ಆನಂದಿಸಿರಿ ಬ್ರೋಷರನ್ನು ನೀಡಸಾಧ್ಯವಿದೆ. ಮಲೆಯಾಳಂ ಇಷ್ಟಪಡುವ ವ್ಯಕ್ತಿಗಳಿಗೆ ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಎಂಬ ಪುಸ್ತಕವನ್ನು ರೂ. 15.00ರ ಕಾಣಿಕೆಗೆ ನೀಡಸಾಧ್ಯವಿದೆ. ಈ ಪುಸ್ತಕವು ವಿಶೇಷ ದರದಲ್ಲಿ ನೀಡಲ್ಪಡಬಾರದೆಂಬುದನ್ನು ದಯವಿಟ್ಟು ಗಮನಿಸಿರಿ.

ಫೆಬ್ರವರಿ: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕ ರೂ. 25.00ರ ಕಾಣಿಕೆಗೆ (ದೊಡ್ಡ ಸೈಸ್‌ ರೂ. 45.00ಕ್ಕೆ). ಪರ್ಯಾಯವಾಗಿ, ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಪುಸ್ತಕವನ್ನು ರೂ. 15.00ರ ಕಾಣಿಕೆಗೆ ನೀಡಸಾಧ್ಯವಿದೆ. ಈ ಪುಸ್ತಕದ ತೆಲುಗು ಭಾಷೆಯ ಮುದ್ರಣವನ್ನು ರೂ. 8.00ರ ವಿಶೇಷ ದರದಲ್ಲಿ ನೀಡಸಾಧ್ಯವಿದೆ ಎಂಬುದನ್ನು ದಯವಿಟ್ಟು ಗಮನದಲ್ಲಿಡಿರಿ.

ಮಾರ್ಚ್‌: ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕ ರೂ. 15.00ರ ಕಾಣಿಕೆಗೆ. ಈ ಪುಸ್ತಕವು ಸಭೆಯಲ್ಲಿ ಇನ್ನೂ ಲಭ್ಯವಿರದಿದ್ದಲ್ಲಿ, ಆಗ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕ ರೂ. 25.00ರ ಕಾಣಿಕೆಗೆ (ದೊಡ್ಡ ಸೈಸ್‌ ರೂ. 45.00ಕ್ಕೆ).

ಎಪ್ರಿಲ್‌ ಮತ್ತು ಮೇ: ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಗಳಿಗೆ ಚಂದಾಗಳು. ಪಾಕ್ಷಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 70.00. ಮಾಸಿಕ ಮುದ್ರಣಗಳ ಒಂದು ವರ್ಷದ ಚಂದಾಗಳು ಮತ್ತು ಪಾಕ್ಷಿಕ ಮುದ್ರಣಗಳ ಆರು ತಿಂಗಳಿನ ಚಂದಾಗಳು ರೂ. 35.00. ಮಾಸಿಕ ಮುದ್ರಣಗಳಿಗೆ ಆರು ತಿಂಗಳುಗಳ ಚಂದಾ ಇರುವುದಿಲ್ಲ.

ಸೂಚನೆ: ಫೆಬ್ರವರಿ ತಿಂಗಳಿಗಾಗಿ ಸೂಚಿಸಲ್ಪಟ್ಟಿರುವ ನೀಡುವಿಕೆಯಲ್ಲಿ ಒಂದು ಬದಲಾವಣೆಯಿದೆ. ಸದಾ ಜೀವಿಸಬಲ್ಲಿರಿ ಮತ್ತು ಕುಟುಂಬ ಪುಸ್ತಕಗಳ ಸಾಕಷ್ಟು ಸರಬರಾಯಿಗಳನ್ನು ಪಡೆದುಕೊಳ್ಳುವಂತೆ ಮತ್ತು ಅವುಗಳ ಸದುಪಯೋಗಮಾಡುವಂತೆ ನಾವು ಎಲ್ಲಾ ಸಭೆಗಳಿಗೆ ಉತ್ತೇಜಿಸುತ್ತೇವೆ. ಪ್ರಚಾರಕರು ವರ್ಷದ ಎಲ್ಲಾ ಸಮಯಗಳಲ್ಲಿ ತಮ್ಮೊಂದಿಗೆ ಈ ಪುಸ್ತಕಗಳ ಪ್ರತಿಗಳನ್ನು ಇಟ್ಟುಕೊಳ್ಳಸಾಧ್ಯವಿದೆ ಮತ್ತು ಸೂಕ್ತವಾದ ಪ್ರತಿಯೊಂದು ಸಂದರ್ಭದಲ್ಲಿ ಅವುಗಳನ್ನು ನೀಡಸಾಧ್ಯವಿದೆ. ಮೇಲೆ ಸೂಚಿಸಲಾದ ಯಾವುದೇ ಕ್ಯಾಂಪೇನ್‌ ಐಟಮ್‌ಗಳನ್ನು ಇನ್ನೂ ವಿನಂತಿಸಿಕೊಂಡಿರದ ಸಭೆಗಳು, ಅವುಗಳ ಮುಂದಿನ ಲಿಟರೇಟರ್‌ ರಿಕ್ವೆಸ್ಟ್‌ ಫಾರ್ಮ್‌ (S-AB-14)ನಲ್ಲಿ ಹಾಗೆ ಮಾಡತಕ್ಕದ್ದು.

◼ ಈ ವರ್ಷ ಮಂಗಳವಾರ, ಎಪ್ರಿಲ್‌ 2ರಂದು, ಸೂರ್ಯಾಸ್ತಮಾನದ ನಂತರ ಜ್ಞಾಪಕವನ್ನು ಆಚರಿಸಲು ಸಭೆಗಳು ಅನುಕೂಲಕರವಾದ ಏರ್ಪಾಡುಗಳನ್ನು ಮಾಡಬೇಕು. ಪ್ರತಿಯೊಂದು ಸಭೆಯು ತನ್ನ ಸ್ವಂತ ಜ್ಞಾಪಕಾಚರಣೆಯನ್ನು ನಡಿಸುವುದು ಅಪೇಕ್ಷಣೀಯವಾಗಿದ್ದರೂ, ಇದು ಯಾವಾಗಲೂ ಸಾಧ್ಯವಾಗದಿರಬಹುದು. ಸಾಮಾನ್ಯವಾಗಿ ಹಲವಾರು ಸಭೆಗಳು ಒಂದೇ ರಾಜ್ಯ ಸಭಾಗೃಹವನ್ನು ಉಪಯೋಗಿಸುವುದಾದರೆ, ಪ್ರಾಯಶಃ ಒಂದು ಅಥವಾ ಹೆಚ್ಚಿನ ಸಭೆಗಳು ಆ ಸಂಜೆಗಾಗಿ ಇನ್ನೊಂದು ಸೌಕರ್ಯದ ಉಪಯೋಗವನ್ನು ಪಡೆಯಸಾಧ್ಯವಿದೆ. ಹೊಸದಾಗಿ ಆಸಕ್ತರಾದ ಜನರಿಗೆ ಹಾಜರಾಗಲು ಅನನುಕೂಲವಾಗುವಷ್ಟು ತಡವಾಗಿ ಜ್ಞಾಪಕವು ಆರಂಭವಾಗಬಾರದು. ಇನ್ನೂ ಹೆಚ್ಚಾಗಿ, ಕಾಲತಖ್ತೆಯು, ಸಂದರ್ಶಕರನ್ನು ಅಭಿವಂದಿಸಲು, ಕೆಲವರಿಗೆ ಇನ್ನೂ ಹೆಚ್ಚಿನ ಆತ್ಮಿಕ ನೆರವಿಗಾಗಿ ಏರ್ಪಾಡುಗಳನ್ನು ಮಾಡಲು ಅಥವಾ ಉತ್ತೇಜನದ ಒಂದು ಸಾಮಾನ್ಯ ವಿನಿಮಯವನ್ನು ಆನಂದಿಸಲು, ಆಚರಣೆಯ ಮುಂಚೆ ಅಥವಾ ನಂತರ ಸಮಯವಿರಲಾರದಷ್ಟು ಬಿಗಿಯಾಗಿರಬಾರದು. ಎಲ್ಲಾ ಅಂಶಗಳನ್ನು ಸಮಗ್ರವಾಗಿ ಪರಿಗಣಿಸಿದ ನಂತರ, ಜ್ಞಾಪಕವನ್ನು ಹಾಜರಾಗುವವರು ಆ ಸಂದರ್ಭದಿಂದ ಪೂರ್ಣವಾಗಿ ಲಾಭವನ್ನು ಪಡೆಯಲು ಯಾವ ಏರ್ಪಾಡುಗಳು ಅತ್ಯುತ್ತಮವಾಗಿ ಸಹಾಯ ಮಾಡುವವೆಂದು ಹಿರಿಯರು ನಿರ್ಣಯಿಸಬೇಕು.

◼ 1996ರ ಜ್ಞಾಪಕ ಕಾಲಕ್ಕಾಗಿರುವ ವಿಶೇಷ ಬಹಿರಂಗ ಭಾಷಣವು, ಎಪ್ರಿಲ್‌ 21ರ ಆದಿತ್ಯವಾರದಂದು ಕೊಡಲ್ಪಡುವುದು. “ವಕ್ರ ಸಂತತಿಯ ನಡುವೆ ನಿರ್ದೋಷಿಗಳಾಗಿ ಉಳಿಯುವುದು” ಎಂಬುದು ಆ ಭಾಷಣದ ವಿಷಯವಾಗಿರುವುದು. ಒಂದು ಹೊರಮೇರೆಯು ಒದಗಿಸಲ್ಪಡುವುದು. ಆ ವಾರಾಂತ್ಯದಲ್ಲಿ ಸರ್ಕಿಟ್‌ ಮೇಲ್ವಿಚಾರಕರ ಸಂದರ್ಶನ, ಸರ್ಕಿಟ್‌ ಸಮ್ಮೇಳನ, ಅಥವಾ ವಿಶೇಷ ಸಮ್ಮೇಳನ ದಿನ ಇರುವ ಸಭೆಗಳು, ವಿಶೇಷ ಭಾಷಣವನ್ನು ಮುಂದಿನ ವಾರದಲ್ಲಿ ಹೊಂದಿರುವವು. ಯಾವ ಸಭೆಯೂ ವಿಶೇಷ ಭಾಷಣವನ್ನು ಎಪ್ರಿಲ್‌ 21ರ ಮುಂಚೆ ನಡೆಸಬಾರದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ