ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆಗಳು
ಫೆಬ್ರವರಿ: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕ ರೂ. 25.00ರ ಕಾಣಿಕೆಗೆ (ದೊಡ್ಡ ಸೈಸ್ ರೂ. 45.00ಕ್ಕೆ). ಪರ್ಯಾಯವಾಗಿ, ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಪುಸ್ತಕವನ್ನು ರೂ. 15.00ರ ಕಾಣಿಕೆಗೆ ನೀಡಸಾಧ್ಯವಿದೆ. ಈ ಪುಸ್ತಕದ ತೆಲುಗು ಭಾಷೆಯ ಮುದ್ರಣವನ್ನು ರೂ. 8.00ರ ವಿಶೇಷ ದರದಲ್ಲಿ ನೀಡಸಾಧ್ಯವಿದೆ ಎಂಬುದನ್ನು ದಯವಿಟ್ಟು ಗಮನದಲ್ಲಿಡಿರಿ.
ಮಾರ್ಚ್: ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕ ರೂ. 15.00ರ ಕಾಣಿಕೆಗೆ. ಈ ಪುಸ್ತಕವು ಸಭೆಯಲ್ಲಿ ಇನ್ನೂ ಲಭ್ಯವಿರದಿದ್ದಲ್ಲಿ, ಆಗ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕ ರೂ. 25.00ರ ಕಾಣಿಕೆಗೆ (ದೊಡ್ಡ ಸೈಸ್ ರೂ. 45.00ಕ್ಕೆ).
ಎಪ್ರಿಲ್ ಮತ್ತು ಮೇ: ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಗಳಿಗೆ ಚಂದಾಗಳು. ಪಾಕ್ಷಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 90.00. ಮಾಸಿಕ ಮುದ್ರಣಗಳ ಒಂದು ವರ್ಷದ ಚಂದಾಗಳು ಮತ್ತು ಪಾಕ್ಷಿಕ ಮುದ್ರಣಗಳ ಆರು ತಿಂಗಳಿನ ಚಂದಾಗಳು ರೂ. 45.00. ಮಾಸಿಕ ಮುದ್ರಣಗಳಿಗೆ ಆರು ತಿಂಗಳುಗಳ ಚಂದಾ ಇರುವುದಿಲ್ಲ. ಚಂದಾ ನಿರಾಕರಿಸಲ್ಪಟ್ಟಲ್ಲಿ, ಪತ್ರಿಕೆಗಳ ಬಿಡಿ ಪ್ರತಿಗಳು ರೂ. 4.00ರ ಕಾಣಿಕೆಗೆ ನೀಡಲ್ಪಡಬೇಕು. ಸೂಕ್ತವಾಗಿರುವಲ್ಲಿ, ಕುಟುಂಬ ಪುಸ್ತಕವೂ ನೀಡಲ್ಪಡಸಾಧ್ಯವಿದೆ.
ಸೂಚನೆ: ವೃತ್ತಪತ್ರಿಕೆಯ ಕಾಗದದ ದರದಲ್ಲಿನ ಹೆಚ್ಚಳದ ಕಾರಣ ಮಾರ್ಚ್ 1, 1996ರಿಂದ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಮತ್ತು ಚಂದಾಗಳ ದರಗಳಲ್ಲಿ ಹೆಚ್ಚಳವಿರುವುದು. ಹೊಸ ದರಗಳು:
ಬಿಡಿ ಪ್ರತಿಗಳು: ಪಯನೀಯರರಿಗೆ: ರೂ. 2.50; ಪ್ರಚಾರಕರಿಗೆ ಮತ್ತು ಸಾರ್ವಜನಿಕರಿಗೆ: ರೂ. 4.00.
ಒಂದು ವರ್ಷದ ಪಾಕ್ಷಿಕ ಚಂದಾಗಳು: ಪಯನೀಯರರಿಗೆ: ರೂ. 60.00; ಪ್ರಚಾರಕರಿಗೆ ಮತ್ತು ಸಾರ್ವಜನಿಕರಿಗೆ: ರೂ. 90.00.
ಒಂದು ವರ್ಷದ ಮಾಸಿಕ ಮತ್ತು ಆರು ತಿಂಗಳುಗಳ ಪಾಕ್ಷಿಕ ಚಂದಾಗಳು: ಪಯನೀಯರರಿಗೆ: ರೂ. 30; ಪ್ರಚಾರಕರಿಗೆ ಮತ್ತು ಸಾರ್ವಜನಿಕರಿಗೆ: ರೂ. 45.00.
◼ ಎಲ್ಲ ಕ್ರಮದ ಪಯನೀಯರರ ಚಟುವಟಿಕೆಯನ್ನು ಸೆಕ್ರಿಟರಿ ಮತ್ತು ಸೇವಾ ಮೇಲ್ವಿಚಾರಕರು ಪುನರ್ವಿಮರ್ಶಿಸಬೇಕು. ಕೇಳಿಕೊಳ್ಳಲ್ಪಡುವ ತಾಸನ್ನು ತಲಪಲು ಯಾರಿಗಾದರೂ ಕಷ್ಟವಿರುವುದಾದರೆ, ಹಿರಿಯರು ನೀಡಲ್ಪಡಬೇಕಾಗಿರುವ ನೆರವಿಗಾಗಿ ಏರ್ಪಾಡನ್ನು ಮಾಡಬೇಕು. ಅಕ್ಟೋಬರ್ 1986ರ ಅವರ್ ಕಿಂಗ್‌ಡಮ್ ಮಿನಿಸ್ಟ್ರಿ ಪುರವಣಿಯ 12-20 ಪ್ಯಾರಗ್ರಾಫ್‌ಗಳಲ್ಲಿರುವ ಅಂಶಗಳನ್ನು ಪುನರ್ವಿಮರ್ಶಿಸಿರಿ.
◼ ಜ್ಞಾಪಕಾಚರಣೆಯು 1996, ಎಪ್ರಿಲ್ 2ರ ಮಂಗಳವಾರದಂದು ನಡೆಸಲ್ಪಡುವುದು. ಭಾಷಣವು ಬೇಗನೆ ಪ್ರಾರಂಭವಾಗಬಹುದಾದರೂ, ಜ್ಞಾಪಕದ ರೊಟ್ಟಿ ಮತ್ತು ದ್ರಾಕ್ಷಾರಸದ ದಾಟಿಸುವಿಕೆಯು ಸೂರ್ಯಾಸ್ತಮಾನವಾಗುವ ತನಕ ಪ್ರಾರಂಭಿಸಲ್ಪಡಬಾರದು ಎಂಬುದನ್ನು ದಯವಿಟ್ಟು ನೆನಪಿನಲ್ಲಿಡಿರಿ. ನಿಮ್ಮ ಕ್ಷೇತ್ರದಲ್ಲಿ ಯಾವಾಗ ಸೂರ್ಯಾಸ್ತಮಾನವಾಗುವುದು ಎಂಬುದನ್ನು ನಿರ್ಣಯಿಸಲು ಸ್ಥಳಿಕ ಮೂಲಗಳೊಂದಿಗೆ ಪರಿಶೀಲಿಸಿರಿ. ಕ್ಷೇತ್ರ ಸೇವೆಗಾಗಿರುವ ಕೂಟಗಳನ್ನು ಬಿಟ್ಟು ಬೇರೆ ಯಾವುದೇ ಕೂಟಗಳನ್ನು ಆ ತಾರೀಖಿನಂದು ನಡೆಸಬಾರದು. ನಿಮ್ಮ ಸಭೆಯು ಸಾಮಾನ್ಯವಾಗಿ ಕೂಟಗಳನ್ನು ಮಂಗಳವಾರ ಹೊಂದಿರುವಲ್ಲಿ, ರಾಜ್ಯ ಸಭಾಗೃಹವು ಲಭ್ಯವಿದ್ದಲ್ಲಿ ವಾರದ ಮತ್ತೊಂದು ದಿನಕ್ಕೆ ಇವುಗಳನ್ನು ಬದಲಾಯಿಸಲು ನೀವು ಬಯಸಬಹುದು.
◼ ಮಾರ್ಚ್, ಎಪ್ರಿಲ್, ಮತ್ತು ಮೇ ತಿಂಗಳುಗಳಲ್ಲಿ ಆಕ್ಸಿಲಿಯರಿ ಪಯನೀಯರರಾಗಿ ಸೇವೆ ಸಲ್ಲಿಸಲು ಇಚ್ಛಿಸುವ ಪ್ರಚಾರಕರು ಈಗಲೇ ತಮ್ಮ ಯೋಜನೆಗಳನ್ನು ಮಾಡಬೇಕು ಮತ್ತು ಮುಂಚಿತವಾಗಿಯೇ ತಮ್ಮ ಅರ್ಜಿಗಳನ್ನು ಕಳುಹಿಸಬೇಕು. ಇದು ಹಿರಿಯರಿಗೆ ಅಗತ್ಯವಿರುವ ಕ್ಷೇತ್ರ ಸೇವಾ ಏರ್ಪಾಡುಗಳನ್ನು ಮಾಡಲು ಮತ್ತು ಸಾಕಷ್ಟು ಪತ್ರಿಕೆಗಳು ಹಾಗೂ ಕೈಯಲ್ಲಿ ಇತರ ಸಾಹಿತ್ಯವಿರುವಂತೆ ಮಾಡಲು ಸಹಾಯಮಾಡುವುದು.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ಯೆಹೋವನ ಸಾಕ್ಷಿಗಳು ಮತ್ತು ಶಿಕ್ಷಣ—ಇಂಗ್ಲಿಷ್
“ಹರ್ಷಭರಿತ ಸ್ತುತಿಗಾರರು” ಜಿಲ್ಲಾ ಅಧಿವೇಶನದಲ್ಲಿ ಬಿಡುಗಡೆಗೊಳಿಸಲ್ಪಟ್ಟ ಈ ಹೊಸ ಬ್ರೋಷರ್, ಪಯನೀಯರರಿಗೆ ರೂ. 3.00 ಮತ್ತು ಪ್ರಚಾರಕರಿಗೆ ಹಾಗೂ ಸಾರ್ವಜನಿಕರಿಗೆ ರೂ. 5.00 ಆಗಿದೆ. ಇದು ಇಂಗ್ಲಿಷ್ ಬ್ರೇಲ್ ಲಿಪಿಯಲ್ಲಿಯೂ ಒಂದು ಸಂಪುಟದಲ್ಲಿ ಲಭ್ಯವಿದೆ.
ನಿತ್ಯಜೀವಕ್ಕೆ ನಡೆಸುವ ಜ್ಞಾನ —ಇಂಗ್ಲಿಷ್, ಕನ್ನಡ, ಗುಜರಾಥಿ, ತಮಿಳು, ತೆಲುಗು, ನೇಪಾಲಿ, ಬಂಗಾಲಿ, ಮರಾಠಿ, ಮಲೆಯಾಳಂ, ಹಿಂದಿ
“ಹರ್ಷಭರಿತ ಸ್ತುತಿಗಾರರು” ಜಿಲ್ಲಾ ಅಧಿವೇಶನದಲ್ಲಿ ಬಿಡುಗಡೆಗೊಳಿಸಲ್ಪಟ್ಟ ಈ ಹೊಸ ಪುಸ್ತಕವು, ಪಯನೀಯರರಿಗೆ ರೂ. 8.00 ಮತ್ತು ಪ್ರಚಾರಕರಿಗೆ ಮತ್ತು ಸಾರ್ವಜನಿಕರಿಗೆ ರೂ. 15.00 ಆಗಿದೆ. ಇದು ಇಂಗ್ಲಿಷ್ ಬ್ರೇಲ್ ಲಿಪಿಯಲ್ಲಿಯೂ ಎರಡು ಸಂಪುಟಗಳಲ್ಲಿ ಲಭ್ಯವಿದೆ.
ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?—ನೇಪಾಲಿ
ದೇವಪ್ರಭುತ್ವ ಶುಶ್ರೂಷಾ ಶಾಲೆ ಮಾರ್ಗದರ್ಶಕ ಪುಸ್ತಕ—ತಮಿಳು
ಶಾಂತಿಭರಿತ ಹೊಸ ಲೋಕದಲ್ಲಿ ಜೀವನ, ಟ್ರ್ಯಾಕ್ಟ್ ನಂಬ್ರ 15—ಉರ್ದು
ಸತ್ತ ಪ್ರಿಯ ಜನರಿಗಾಗಿ ನಿರೀಕ್ಷೆ ಏನು? ಟ್ರ್ಯಾಕ್ಟ್ ನಂಬ್ರ 16—ಉರ್ದು
ಯೆಹೋವನ ಸಾಕ್ಷಿಗಳ ನಂಬಿಕೆ ಏನು? ಟ್ರ್ಯಾಕ್ಟ್ ನಂಬ್ರ 14—ಉರ್ದು
◼ ಪುನಃ ದೊರೆಯುವ ಪ್ರಕಾಶನಗಳು:
“ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ”—ಇಂಗ್ಲಿಷ್, ಕನ್ನಡ, ತಮಿಳು, ನೇಪಾಲಿ, ಮಲೆಯಾಳಂ, ಹಿಂದಿ
ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ (ಚಿಕ್ಕದು)—ತಮಿಳು
ಮಹಾ ಬೋಧಕನಿಗೆ ಕಿವಿಗೊಡುವುದು—ಮಲೆಯಾಳಂ, ತಮಿಳು
◼ ಲಭ್ಯವಿರುವ ಹೊಸ ವಿಡಿಯೋಕ್ಯಾಸೆಟ್ಟುಗಳು:
ಬೈಬಲ್—ವಾಸ್ತವಾಂಶದ ಮತ್ತು ಪ್ರವಾದನೆಯ ಒಂದು ಪುಸ್ತಕ ಸಂಪುಟ I: ಬೈಬಲ್—ನಿಷ್ಕೃಷ್ಟ ಚರಿತ್ರೆ, ಭರವಸಾರ್ಹ ಪ್ರವಾದನೆ—ಇಂಗ್ಲಿಷ್
ಬೈಬಲ್—ವಾಸ್ತವಾಂಶದ ಮತ್ತು ಪ್ರವಾದನೆಯ ಒಂದು ಪುಸ್ತಕ ಸಂಪುಟ I: ಬೈಬಲ್—ಮಾನವಕುಲದ ಅತ್ಯಂತ ಹಳೆಯ ಆಧುನಿಕ ಪುಸ್ತಕ—ಇಂಗ್ಲಿಷ್
ದೈವಿಕ ಬೋಧನೆಯ ಮೂಲಕ ಐಕ್ಯರು—ಇಂಗ್ಲಿಷ್
ಈ ವಿಡಿಯೋಕ್ಯಾಸೆಟ್ಟುಗಳು ಕ್ರಮವಾದ ಲಿಟರೇಚರ್ ರಿಕ್ವೆಸ್ಟ್ ಫಾರ್ಮ್ (S-AB-14)ನಲ್ಲಿ ಆರ್ಡರ್ ಮಾಡಲ್ಪಡಸಾಧ್ಯವಿದೆ. ಪ್ರತಿ ಕ್ಯಾಸೆಟ್ ಪಯನೀಯರರಿಗೆ ರೂ. 150.00 ಮತ್ತು ಪ್ರಚಾರಕರಿಗೆ ಮತ್ತು ಸಾರ್ವಜನಿಕರಿಗೆ ರೂ. 200.00.