ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 9/97 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 1997 ನಮ್ಮ ರಾಜ್ಯದ ಸೇವೆ
1997 ನಮ್ಮ ರಾಜ್ಯದ ಸೇವೆ
km 9/97 ಪು. 7

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆಗಳು ಸೆಪ್ಟೆಂಬರ್‌: ಕುಟುಂಬ ಸಂತೋಷದ ರಹಸ್ಯ ಪುಸ್ತಕ, ರೂ. 20.00ರ ಕಾಣಿಕೆಗೆ. ಅಕ್ಟೋಬರ್‌: ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಗಳಿಗೆ ಚಂದಾಗಳು. ಪಾಕ್ಷಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 90.00 ಆಗಿದೆ. ಮಾಸಿಕ ಮುದ್ರಣಗಳಿಗಾಗಿ ಒಂದು ವರ್ಷದ ಚಂದಾಗಳು ಮತ್ತು ಪಾಕ್ಷಿಕ ಮುದ್ರಣಗಳಿಗೆ ಆರು ತಿಂಗಳಿನ ಚಂದಾಗಳು ರೂ. 45.00 ಆಗಿವೆ. ಮಾಸಿಕ ಮುದ್ರಣಗಳಿಗಾಗಿ ಆರು ತಿಂಗಳುಗಳ ಚಂದಾ ಇರುವುದಿಲ್ಲ. ಚಂದಾವು ನಿರಾಕರಿಸಲ್ಪಡುವಲ್ಲಿ, ಪತ್ರಿಕೆಗಳ ಪ್ರತಿಯೊಂದು ಬಿಡಿ ಪ್ರತಿಗಳು ರೂ. 4.00ಕ್ಕೆ ನೀಡಲ್ಪಡಬೇಕು. ಚಂದಾಗಳನ್ನು ಪಡೆದುಕೊಳ್ಳುವಾಗ, ಕಾವಲಿನಬುರುಜು ಪತ್ರಿಕೆಯು ಪಂಜಾಬಿ ಮತ್ತು ಉರ್ದು (ಈ ಭಾಷೆಗಳಲ್ಲಿ ಅದು ಮಾಸಿಕವಾಗಿದೆ) ಭಾಷೆಗಳ ಹೊರತಾಗಿ, ಎಲ್ಲ ಭಾರತೀಯ ಭಾಷೆಗಳಲ್ಲಿ ಮತ್ತು ನೇಪಾಲಿಯಲ್ಲಿ ಪಾಕ್ಷಿಕವಾಗಿದೆ ಎಂಬುದನ್ನು ದಯವಿಟ್ಟು ಜ್ಞಾಪಕದಲ್ಲಿಡಿರಿ. ಎಚ್ಚರ! ಪತ್ರಿಕೆಯು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಪಾಕ್ಷಿಕವಾಗಿದೆ, ಆದರೆ ಕನ್ನಡ, ಗುಜರಾಥಿ, ತೆಲುಗು, ನೇಪಾಲಿ, ಮರಾಠಿ, ಮತ್ತು ಹಿಂದಿ ಭಾಷೆಗಳಲ್ಲಿ ಮಾಸಿಕವಾಗಿದೆ. ಉರ್ದು ಮತ್ತು ಪಂಜಾಬಿ ಭಾಷೆಗಳಲ್ಲಿ ಎಚ್ಚರ! ಪತ್ರಿಕೆಯ ತ್ರೈಮಾಸಿಕ ವಿತರಣಾ ಪ್ರತಿಗಳು ಸಭೆಗಳಿಗೆ ದೊರಕುತ್ತವೆ, ಆದರೆ ಈ ಎರಡು ಭಾಷೆಗಳಲ್ಲಿ ವೈಯಕ್ತಿಕ ಚಂದಾಗಳು ದೊರಕುವುದಿಲ್ಲ. ತಿಂಗಳ ಕೊನೆಯ ಭಾಗದಿಂದ ಆರಂಭಿಸುತ್ತಾ, ರಾಜ್ಯ ವಾರ್ತೆ ನಂ. 35 ವಿತರಿಸಲ್ಪಡುವುದು. ನವೆಂಬರ್‌: ರಾಜ್ಯ ವಾರ್ತೆ ನಂ. 35ರ ವಿತರಣೆಯು ಮುಂದುವರಿಯುವುದು. ಪ್ರತಿಯೊಂದು ಮನೆಯಲ್ಲಿರುವ ಅಥವಾ ವಾಸದ ಸ್ಥಳದಲ್ಲಿರುವ ಮನೆಯವರನ್ನು ರಾಜ್ಯ ವಾರ್ತೆ ನಂ. 35ರೊಂದಿಗೆ ತಲಪುವುದರ ಮೂಲಕ ತಮ್ಮ ಟೆರಿಟೊರಿಯನ್ನು ಸಂಪೂರ್ಣವಾಗಿ ಆವರಿಸುವ ಸಭೆಗಳು, ಜ್ಞಾನ ಪುಸ್ತಕವನ್ನು ರೂ. 20.00ಕ್ಕೆ ಕೊಡಬಹುದು. ಡಿಸೆಂಬರ್‌: ಈ ಮುಂದಿನ ಮೂರು ಪುಸ್ತಕಗಳಲ್ಲಿ ಯಾವುದೇ ಒಂದು ಪುಸ್ತಕವು, ರೂ. 45.00ರ ಕಾಣಿಕೆಗಾಗಿ: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ, (ಚಿಕ್ಕ ಸೈಜ್‌ ರೂ. 25.00), ಬೈಬಲ್‌ ಕಥೆಗಳ ನನ್ನ ಪುಸ್ತಕ, (ಇಂಗ್ಲಿಷ್‌, ಚಿಕ್ಕ ಸೈಜ್‌ ರೂ. 30.00), ಅಥವಾ ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ. ಪರ್ಯಾಯವಾಗಿ, ವಿಶೇಷ ದರದ ಪುಸ್ತಕಗಳಾಗಿ, ಜುಲೈ ತಿಂಗಳಿನ ನಮ್ಮ ರಾಜ್ಯದ ಸೇವೆಯಲ್ಲಿ ಪಟ್ಟಿಮಾಡಲ್ಪಟ್ಟಿರುವ ಪುಸ್ತಕಗಳಲ್ಲಿ ಯಾವುದೇ ಪುಸ್ತಕಗಳನ್ನು ರೂ. 2. 50ಕ್ಕೆ ನೀಡಸಾಧ್ಯವಿದೆ.

ಸೂಚನೆ: ಮೇಲೆ ಉಲ್ಲೇಖಿಸಲ್ಪಟ್ಟಿರುವ ಯಾವುದೇ ಕ್ಯಾಂಪೇನ್‌ ಐಟಮ್‌ಗಳನ್ನು ಇನ್ನೂ ವಿನಂತಿಸಿರದ ಸಭೆಗಳು, ತಮ್ಮ ಮುಂದಿನ ಲಿಟರೇಚರ್‌ ರಿಕ್ವೆಸ್ಟ್‌ ಫಾರ್ಮ್‌ (S-AB-14)ನಲ್ಲಿ ಹಾಗೆ ಮಾಡತಕ್ಕದ್ದು.

◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನೇಮಿಸಲ್ಪಟ್ಟ ಯಾರಾದರೊಬ್ಬರು ಸಭಾ ಅಕೌಂಟ್ಸನ್ನು ಸೆಪ್ಟೆಂಬರ್‌ 1 ಅಥವಾ ಅನಂತರ ಸಾಧ್ಯವಾದಷ್ಟು ಬೇಗನೇ ಲೆಕ್ಕ ತಪಾಸಣೆ ಮಾಡಬೇಕು. ಇದು ಮಾಡಿದ ಅನಂತರ ಸಭೆಗೆ ಪ್ರಕಟನೆಯನ್ನು ಮಾಡಿರಿ.

◼ ಪುನಸ್ಸ್ಥಾಪಿತರಾಗುವ ಪ್ರವೃತ್ತಿಯಿರಬಹುದಾದ ಯಾವುದೇ ಬಹಿಷ್ಕೃತ

ರು ಅಥವಾ ಬೇರ್ಪಡಿಸಿಕೊಂಡ ವ್ಯಕ್ತಿಗಳ ಕುರಿತಾಗಿ, ಎಪ್ರಿಲ್‌ 15, 1991ರ ವಾಚ್‌ಟವರ್‌ ಪತ್ರಿಕೆಯ, 21-3ನೆಯ ಪುಟಗಳಲ್ಲಿ ಕೊಡಲ್ಪಟ್ಟಿರುವ ಸೂಚನೆಗಳನ್ನು ಅನುಸರಿಸುವಂತೆ ಹಿರಿಯರನ್ನು ಜ್ಞಾಪಿಸಲಾಗುತ್ತದೆ.

◼ ಎಲ್ಲಾ ಪ್ರಚಾರಕರು ಆಗಸ್ಟ್‌ ತಿಂಗಳಿಗಾಗಿರುವ ತಮ್ಮ ಕ್ಷೇತ್ರ ಸೇವಾ ವರದಿಯನ್ನು, ಆಗಸ್ಟ್‌ 31ರ ಆದಿತ್ಯವಾರದೊಳಗೆ ಸಲ್ಲಿಸುವಂತೆ ಉತ್ತೇಜಿಸಲಾಗಿದೆ. ವಾರ್ಷಿಕ ವರದಿಯನ್ನು ಸರಿಯಾದ ಸಮಯದಲ್ಲಿ ನಾವು ಸಂಕಲಿಸಲು ಶಕ್ತರಾಗುವಂತೆ, ಸಭಾ ಸೆಕ್ರಿಟರಿಗಳು ಕಾಂಗ್ರಿಗೇಷನ್‌ ರಿಪೋರ್ಟ್‌ (S-1) ಅನ್ನು ಕೊನೆಯ ಪಕ್ಷ ಸೆಪ್ಟೆಂಬರ್‌ 3ರ ಬುಧವಾರದೊಳಗೆ ತಯಾರಿಸಿ, ನಮಗೆ ಪೋಸ್ಟ್‌ ಮಾಡುವಂತೆ ವಿನಂತಿಸಲಾಗಿದೆ.

◼ ಸಾಹಿತ್ಯಕ್ಕಾಗಿ ವ್ಯಕ್ತಿಗತ ಪ್ರಚಾರಕರ ವಿನಂತಿಗಳನ್ನು ಸೊಸೈಟಿಯು ಪೂರೈಸುವುದಿಲ್ಲ. ವೈಯಕ್ತಿಕ ಸಾಹಿತ್ಯ ಐಟಮ್‌ಗಳನ್ನು ಪಡೆದುಕೊಳ್ಳುವುದರಲ್ಲಿ ಆಸಕ್ತರಿರುವವರೆಲ್ಲರೂ, ಸಾಹಿತ್ಯವನ್ನು ನಿರ್ವಹಿಸುವ ಸಹೋದರನಿಗೆ ಹೇಳಲು ಸಾಧ್ಯವಾಗುವಂತೆ, ಸಾಹಿತ್ಯಕ್ಕಾಗಿ ಸಭೆಯ ಮಾಸಿಕ ವಿನಂತಿಯನ್ನು ಸೊಸೈಟಿಗೆ ಕಳುಹಿಸುವ ಮುಂಚೆ, ಪ್ರತಿ ತಿಂಗಳು ಒಂದು ಪ್ರಕಟನೆಯನ್ನು ಮಾಡುವಂತೆ ಅಧ್ಯಕ್ಷ ಮೇಲ್ವಿಚಾರಕನು ಏರ್ಪಡಿಸಬೇಕು. ಯಾವ ಪ್ರಕಾಶನಗಳು ವಿಶೇಷ ವಿನಂತಿಯ ಐಟಮ್‌ಗಳಾಗಿವೆಯೆಂಬುದನ್ನು ದಯವಿಟ್ಟು ಮನಸ್ಸಿನಲ್ಲಿಡಿರಿ.

◼ ಸಾಹಿತ್ಯ ವಿನಂತಿಗಳನ್ನು ಮಾಡುವಾಗ, ಸೊಸೈಟಿಯ ಸಿಡಿ-ರಾಮ್‌ ಕೇವಲ ಪ್ರಚಾರಕರ ಬಳಕೆಗಾಗಿದೆಯೆಂಬುದನ್ನು ಸಭೆಗಳು ಮನಸ್ಸಿನಲ್ಲಿಡತಕ್ಕದ್ದು, ಯಾಕಂದರೆ ಅದರಲ್ಲಿ ಸಾಮಾನ್ಯ ಸಾರ್ವಜನಿಕರಿಗೆ ಒದಗಿಸಲ್ಪಡದ ನಿರ್ದಿಷ್ಟ ಮಾಹಿತಿಯು ಅಡಕವಾಗಿದೆ.

◼ ಮೇ 1997ರ ನಮ್ಮ ರಾಜ್ಯದ ಸೇವೆಯ “ಪ್ರಶ್ನಾ ರೇಖಾಚೌಕ”ವು, ನಾವು ವಿರುದ್ಧ ಲಿಂಗದ ಪ್ರಚಾರಕರೊಂದಿಗೆ ಶುಶ್ರೂಷೆಯಲ್ಲಿ ಕೆಲಸಮಾಡುತ್ತಿರುವುದರ ಕುರಿತು ಜಾಗರೂಕರಾಗಿರುವುದನ್ನು ಶಿಫಾರಸ್ಸು ಮಾಡಿತು. ಈ ವಿಷಯದಲ್ಲಿ ಎಲ್ಲರೂ ಒಳ್ಳೆಯ ಪರಿಜ್ಞಾನವನ್ನು ಉಪಯೋಗಿಸಲು ಸಕಾರಣಗಳಿವೆ. ಸಂಚರಣಾ ಮೇಲ್ವಿಚಾರಕರು ಅಥವಾ ಇತರ ಸಹೋದರರು ಸಹ, ಸಹೋದರಿಯರೊಂದಿಗೆ ಕ್ಷೇತ್ರ ಸೇವೆಯಲ್ಲಿ ಕೆಲಸಮಾಡಸಾಧ್ಯವಿಲ್ಲವೆಂದು ಇದರ ಅರ್ಥವಾಗಿರುವುದಿಲ್ಲ. ಬದಲಿಗೆ, ಒಬ್ಬ ಸಹೋದರನು, ತಾನು ಯಾರಿಗೆ ಸಂಬಂಧಿಯಾಗಿಲ್ಲವೊ ಆ ವಿರುದ್ಧ ಲಿಂಗದ ಒಬ್ಬ ವ್ಯಕ್ತಿಯೊಂದಿಗೇ, ಕ್ರಮವಾಗಿ ಒಂಟಿಗನಾಗಿ ಸಮಯವನ್ನು ಕಳೆಯುವುದು ವಿವೇಕಯುತವಲ್ಲವೆಂಬ ವಿಚಾರವು ವ್ಯಕ್ತಪಡಿಸಲ್ಪಟ್ಟಿತ್ತು.

◼ ಮೇ 22ರಂದು ಒಂದು ಶಕ್ತಿಶಾಲಿ ಭೂಕಂಪವು ಮಧ್ಯಪ್ರದೇಶದಲ್ಲಿರುವ ಜಬಲ್ಪುರ್‌ ನಗರವನ್ನು ಜಾಲಿಸಿದಾಗ, ಅಲ್ಲಿರುವ ಸಭೆಯಲ್ಲಿನ 19 ಮಂದಿ ಪ್ರಚಾರಕರಲ್ಲಿ ಯಾರೊಬ್ಬರೂ ಹಾನಿಗೊಳಗಾಗಲಿಲ್ಲವೆಂದು ತಿಳಿಯಲು ನೀವು ಸಂತೋಷಪಡುವಿರಿ. ಅಧ್ಯಕ್ಷ ಮೇಲ್ವಿಚಾರಕನ ಮನೆಯ ಪಕ್ಕದಲ್ಲಿದ್ದ ವಸತಿಗೃಹಗಳ ಕಟ್ಟಡವೊಂದು ಕುಸಿಯಿತು. ಅವನ ಮನೆಯ ಗೋಡೆಯಲ್ಲಿ ಒಂದು ಬಿರುಕು ತೋರಿಬಂತು ಮತ್ತು ಅವನ ಮೆಟ್ಟಿಲುಸಾಲಿಗೆ ಹಾನಿಯಾಯಿತಾದರೂ, ಯಾರಿಗೂ ಗಾಯವಾಗಲಿಲ್ಲ. ಹಲವಾರು ಧಾರ್ಮಿಕ ಕಟ್ಟಡಗಳಿಗೆ ಹಾನಿಯಾಯಿತು. ಕಾರ್ಯತಃ ಎರಡು ಭಾಗವಾಗಿ ವಿಭಜಿತವಾದ ಒಂದು ದೊಡ್ಡ ಚರ್ಚು ಇದರಲ್ಲಿ ಸೇರಿತ್ತು, ಆದರೆ ಸಾಕ್ಷಿಗಳ ಕೂಟದ ಸ್ಥಳವು ಬಾಧಿಸಲ್ಪಡಲಿಲ್ಲ. ಈ ವಿಷಯದಲ್ಲಿ ನಿಮ್ಮ ವಿಚಾರಣೆಗಳನ್ನು ನಾವು ಗಣ್ಯಮಾಡುತ್ತೇವೆ, ಯಾಕಂದರೆ ನೀವು ಬಹುಶಃ ಎಂದೂ ಭೇಟಿಯಾಗಿರದ, ನಮ್ಮ ಲೋಕವ್ಯಾಪಕ ಸಹೋದರತ್ವದ ಸದಸ್ಯರಿಗಾಗಿರುವ ನಿಮ್ಮ ಸಹೋದರ ಪ್ರೀತಿ ಮತ್ತು ಚಿಂತೆಯನ್ನು ಇವು ಪ್ರತಿಬಿಂಬಿಸುತ್ತವೆ.

◼ ಗೋವಾ, ಪಣಜಿಯಲ್ಲಿರುವ ಜಿಲ್ಲಾ ಅಧಿವೇಶನದ ತಾರೀಖು, 1997, ನವೆಂಬರ್‌ 21-23ಕ್ಕೆ ಬದಲಾಯಿಸಲ್ಪಟ್ಟಿದೆ.

◼ ಈ ವರ್ಷ ಕೇರಳದಲ್ಲಿ ಮೂರು ಅಧಿವೇಶನಗಳು ಜರುಗಲಿರುವುದರಿಂದ, ಪ್ರತಿಯೊಂದು ಅಧಿವೇಶನಕ್ಕೆ ನೇಮಿಸಲ್ಪಟ್ಟಿರುವ ಸರ್ಕಿಟುಗಳು ಇಲ್ಲಿ ತೋರಿಸಲ್ಪಟ್ಟಿವೆ:

ಕಟ್ಟಪ್ಪನ (ಡಿಸೆಂ. 12-14): KE-5 ಸರ್ಕಿಟ್‌ನಲ್ಲಿರುವ ಎಲ್ಲಾ ಸಭೆಗಳು ಮತ್ತು KE-7 ಸರ್ಕಿಟ್‌ನಲ್ಲಿನ ಹೈ ರೇಂಜ್‌ಗಳಲ್ಲಿರುವ ಸಭೆಗಳು.

ಎರ್ನಾಕುಲಮ್‌ (ಡಿಸೆಂ. 26-28): KE-3, KE-4, KE-6, ಮತ್ತು KE-8 ಸರ್ಕಿಟ್‌ಗಳಲ್ಲಿರುವ ಎಲ್ಲಾ ಸಭೆಗಳು, ಹಾಗೂ KE-7 ಸರ್ಕಿಟ್‌ನಲ್ಲಿನ ಹೈ ರೇಂಜ್‌ಗಳಲ್ಲಿರದ ಸಭೆಗಳು.

ಕೋಝಿಕೋಡ್‌ (ಜನ. 2-4, 1998): KE-1 ಮತ್ತು KE-2 ಸರ್ಕಿಟ್‌ಗಳಲ್ಲಿರುವ ಎಲ್ಲಾ ಸಭೆಗಳು.

◼ ಲಭ್ಯವಿರುವ ಹೊಸ ಪ್ರಕಾಶನಗಳು:

ಬೈಬಲ್‌ ಕಥೆಗಳ ನನ್ನ ಪುಸ್ತಕ (ಚಿಕ್ಕ ಸೈಜ್‌)—ತೆಲುಗು

◼ ಸ್ಟಾಕ್‌ನಲ್ಲಿಲ್ಲದ ಪ್ರಕಾಶನಗಳು:

ನಿಜ ಶಾಂತಿ ಮತ್ತು ಭದ್ರತೆ—ಯಾವ ಮೂಲದಿಂದ?—ತಮಿಳು

ಮಾನವನು ಇಲ್ಲಿ ವಿಕಾಸದ ಮೂಲಕ ಬಂದನೋ, ಸೃಷ್ಟಿಯ ಮೂಲಕವೋ?—ಇಂಗ್ಲಿಷ್‌

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ