ಪ್ರಕಟನೆಗಳು
◼ ಜನವರಿ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ಅರ್ಧ ದರ ಮತ್ತು ವಿಶೇಷ ದರದಲ್ಲಿ ಕೊಡಲು ಪಟ್ಟಿಮಾಡಲ್ಪಟ್ಟಿರುವ ಯಾವುದೇ 192 ಪುಟದ ಹಳೆಯ ಪುಸ್ತಕ. ಹಿರಿಯರಿಗೆ ಸೂಚನೆ: ಸೊಸೈಟಿಯ ಬಳಿ ಲಭ್ಯವಿರುವ ಹಳೆಯ ಪ್ರಕಾಶನಗಳ ಕುರಿತಾಗಿ ತಿಳಿದುಕೊಳ್ಳಲು ಅಕ್ಟೋಬರ್ 1998ರ ನಮ್ಮ ರಾಜ್ಯದ ಸೇವೆಯನ್ನು ದಯವಿಟ್ಟು ನೋಡಿರಿ. ಈ ಪುಸ್ತಕಗಳನ್ನು ಭವಿಷ್ಯತ್ತಿನಲ್ಲಿ ಉಪಯೋಗಿಸಲಿಕ್ಕಾಗಿಯೂ ನೀವು ಆರ್ಡರ್ ಮಾಡಬಹುದು. ಫೆಬ್ರವರಿ: ಕುಟುಂಬ ಸಂತೋಷದ ರಹಸ್ಯ. ಮಾರ್ಚ್: ನಿತ್ಯಜೀವಕ್ಕೆ ನಡೆಸುವ ಜ್ಞಾನ. ಮನೆ ಬೈಬಲ್ ಅಭ್ಯಾಸಗಳನ್ನು ಪ್ರಾರಂಭಿಸಲು ವಿಶೇಷವಾದ ಪ್ರಯತ್ನವನ್ನು ಮಾಡಲಾಗುವುದು. ಏಪ್ರಿಲ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗಾಗಿ ಚಂದಾಗಳು. ಆಸಕ್ತಿ ತೋರಿಸುವ ಜನರಿಗೆ ಅಪೇಕ್ಷಿಸು ಬ್ರೋಷರನ್ನು ನೀಡಿರಿ ಮತ್ತು ಮನೆ ಬೈಬಲ್ ಅಭ್ಯಾಸಗಳನ್ನು ಪ್ರಾರಂಭಿಸಲು ಪ್ರಯತ್ನಿಸಿರಿ.
◼ ಜನವರಿ 4ರ ವಾರದ ಸೇವಾ ಕೂಟದಲ್ಲಿ ಹಾಜರಿರುವ ಎಲ್ಲ ದೀಕ್ಷಾಸ್ನಾನಿತ ಪ್ರಚಾರಕರಿಗೆ ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್/ರಿಲೀಸ್ ಕಾರ್ಡ್ ಮತ್ತು ಅವರ ಮಕ್ಕಳಿಗೆ ಐಡೆಂಟಿಟಿ ಕಾರ್ಡ್ ನೀಡಲಾಗುವುದು.
◼ ಈ ವರ್ಷ ಗುರುವಾರ, ಏಪ್ರಿಲ್ 1ರ ಸೂರ್ಯಾಸ್ತಮಾನದ ಅನಂತರ ಜ್ಞಾಪಕಾಚರಣೆಯನ್ನು ಆಚರಿಸಲು ಸಭೆಗಳು ಏರ್ಪಾಡುಗಳನ್ನು ಮಾಡಬೇಕು. ಭಾಷಣವು ಸ್ವಲ್ಪ ಬೇಗನೆ ಪ್ರಾರಂಭವಾಗಬಹುದಾದರೂ, ಜ್ಞಾಪಕದ ಕುರುಹುಗಳನ್ನು ಸೂರ್ಯಾಸ್ತಮಾನದ ಮುಂಚೆ ದಾಟಿಸಬಾರದು. ನಿಮ್ಮ ಪ್ರದೇಶದಲ್ಲಿ ಸೂರ್ಯಾಸ್ತಮಾನವು ಯಾವಾಗ ಆಗುತ್ತದೆ ಎಂಬುದರ ಬಗ್ಗೆ ಸ್ಥಳಿಕ ಮೂಲಗಳನ್ನು ಸಂಪರ್ಕಿಸಿ ತಿಳಿದುಕೊಳ್ಳಿರಿ. ಪ್ರತಿ ಸಭೆಯು ತನ್ನ ಸ್ವಂತ ಜ್ಞಾಪಕಾಚರಣೆಯನ್ನು ನಡೆಸುವುದು ಒಳ್ಳೆಯದಾಗಿರುವುದಾದರೂ, ಇದು ಯಾವಾಗಲೂ ಸಾಧ್ಯವಾಗುವುದಿಲ್ಲ. ಒಂದೇ ರಾಜ್ಯಸಭಾಗೃಹವನ್ನು ಹಲವಾರು ಸಭೆಗಳು ಉಪಯೋಗಿಸುತ್ತಿರುವಾಗ, ಆ ಸಂಜೆಯಂದು ಒಂದು ಅಥವಾ ಹೆಚ್ಚಿನ ಸಭೆಗಳು ಜ್ಞಾಪಕಾಚರಣೆಯನ್ನು ಬೇರೆಲ್ಲಾದರೂ ನಡೆಸುವುದು ಒಳ್ಳೆಯದು. ಸಾಧ್ಯವಿರುವಲ್ಲಿ, ಹಾಜರಿರುವವರನ್ನು ಅಭಿವಂದಿಸಲು, ಹೊಸದಾಗಿ ಆಸಕ್ತಿ ತೋರಿಸುತ್ತಿರುವವರನ್ನು ಪ್ರೋತ್ಸಾಹಿಸಲು ಮತ್ತು ಆ ಸಂದರ್ಭದಿಂದ ಸಂಪೂರ್ಣ ರೀತಿಯಲ್ಲಿ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ ಕಾರ್ಯಕ್ರಮಗಳ ನಡುವೆ ಕಡಿಮೆ ಪಕ್ಷ 40 ನಿಮಿಷಗಳಷ್ಟು ಸಮಯವನ್ನು ಅನುಮತಿಸುವಂತೆ ನಾವು ಸಲಹೆನೀಡುತ್ತೇವೆ. ಪ್ರಯಾಣಿಕರನ್ನು ಇಳಿಸುವುದು, ಹತ್ತಿಸಿಕೊಳ್ಳುವುದನ್ನು ಸೇರಿಸಿ, ಟ್ರ್ಯಾಫಿಕ್ ಮತ್ತು ಪಾರ್ಕಿಂಗ್ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸ್ಥಳಿಕವಾಗಿ ಯಾವ ಏರ್ಪಾಡುಗಳು ಉತ್ತಮವಾಗಿರುವುದು ಎಂಬುದನ್ನು ಹಿರಿಯರ ಮಂಡಳಿಯು ನಿರ್ಧರಿಸಬೇಕು.
◼ 1999ರ ಜ್ಞಾಪಕಾಚರಣೆಯ ಸಮಯದಲ್ಲಿ ವಿಶೇಷ ಬಹಿರಂಗ ಭಾಷಣವು ಭಾನುವಾರ, ಏಪ್ರಿಲ್ 18ರಂದು ನೀಡಲಾಗುವುದು. ಭಾಷಣದ ವಿಷಯವು, “ದೇವರೊಂದಿಗೆ ಮತ್ತು ನೆರೆಯವರೊಂದಿಗೆ ನಿಜ ಮಿತ್ರತ್ವ” ಎಂದಾಗಿರುವುದು. ಇದರ ಹೊರಮೇರೆಯನ್ನು ಕೊಡಲಾಗುವುದು. ಆ ವಾರಾಂತ್ಯದಲ್ಲಿ ಸರ್ಕಿಟ್ ಮೇಲ್ವಿಚಾರಕನ ಸಂದರ್ಶನ, ಸರ್ಕಿಟ್ ಸಮ್ಮೇಳನ, ಅಥವಾ ವಿಶೇಷ ಸಮ್ಮೇಳನವಿರುವ ಸಭೆಗಳಿಗೆ ಅದರ ಮುಂದಿನ ವಾರದಲ್ಲಿ ಈ ವಿಶೇಷ ಭಾಷಣವನ್ನು ನೀಡಲಾಗುವುದು. ಯಾವ ಸಭೆಯಲ್ಲಿಯೂ 1999, ಏಪ್ರಿಲ್ 18ರ ಮುಂಚೆ ಈ ವಿಶೇಷ ಭಾಷಣವು ನೀಡಲ್ಪಡಬಾರದು.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ನಾವು ಮೃತಹೊಂದಿದಾಗ ಏನು ಸಂಭವಿಸುತ್ತದೆ?—ಇಂಗ್ಲಿಷ್
ನಿಮ್ಮ ಕುರಿತು ಚಿಂತಿಸುವ ಒಬ್ಬ ನಿರ್ಮಾಣಿಕನು ಇದ್ದಾನೋ?—ಇಂಗ್ಲಿಷ್
ನಿತ್ಯಜೀವಕ್ಕೆ ನಡೆಸುವ ಜ್ಞಾನ—ಅಸ್ಸಾಮಿ ಮತ್ತು ಒರಿಯಾ
ಬೈಬಲ್ ಚರ್ಚೆಗಳನ್ನು ಪ್ರಾರಂಭಿಸುವ ಮತ್ತು ಮುಂದುವರಿಸಿಕೊಂಡುಹೋಗುವ ವಿಧ (ರೀಸನಿಂಗ್ ಪುಸ್ತಕದ 9-24 ಪುಟಗಳಿಂದ) (16 ಪುಟಗಳು)—ನೇಪಾಲಿ
ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು—ಕನ್ನಡ, ನೇಪಾಲಿ, ಮರಾಠಿ ಮತ್ತು ಹಿಂದಿ
◼ ಲಭ್ಯವಿರುವ ಹೊಸ ಆಡಿಯೊಕ್ಯಾಸೆಟ್:
ನಿಮ್ಮ ಕಣ್ಣನ್ನು ಸರಳವಾಗಿಟ್ಟುಕೊಳ್ಳಿರಿ (ಒಂದೇ ಕ್ಯಾಸೆಟ್)—ಇಂಗ್ಲಿಷ್, ಕನ್ನಡ, ಗುಜರಾಥಿ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ
(ಆಡಿಯೊಕ್ಯಾಸೆಟ್ಟಿನ ಬೆಲೆ ಪಯನೀಯರರಿಗೆ ರೂ. 60.00 ಮತ್ತು ಪ್ರಚಾರಕರಿಗೆ ರೂ. 70.00 ಆಗಿದೆ)