ಸಾರುವಿಕೆಯು ನಮ್ಮನ್ನು ಇತರರಿಂದ ಭಿನ್ನರಾಗಿರಿಸುತ್ತದೆ
1 “ಯೆಹೋವನ ಸಾಕ್ಷಿಗಳು ಬೇರೆ ಧರ್ಮಗಳಿಂದ ಹೇಗೆ ಭಿನ್ನರಾಗಿದ್ದಾರೆ?” ಎಂಬುದಾಗಿ ಅನೇಕ ಜನರು ಕೇಳುತ್ತಾರೆ. ನೀವು ಇದಕ್ಕೆ ಹೇಗೆ ಉತ್ತರಿಸುವಿರಿ? ನಮ್ಮ ಕೆಲವೊಂದು ಬೈಬಲ್ ಆಧಾರಿತ ನಂಬಿಕೆಗಳನ್ನು ನೀವು ವಿವರಿಸಬಹುದು. ಆದರೆ ನಮ್ಮ ಬಹಿರಂಗ ಶುಶ್ರೂಷೆಯು ಸಹ ನಮ್ಮನ್ನು ಬೇರೆ ಧರ್ಮಗಳಿಂದ ಎಷ್ಟೊಂದು ಭಿನ್ನರಾಗಿಸುತ್ತದೆಂಬುದರ ಕುರಿತು ನೀವು ಎಂದಾದರೂ ಯೋಚಿಸಿದ್ದೀರೊ?—ಮತ್ತಾ. 24:14; 28:19, 20.
2 ಇಂದು, ಕೆಲವೇ ಧಾರ್ಮಿಕ ವ್ಯಕ್ತಿಗಳು ತಮ್ಮ ನಂಬಿಕೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವಂತೆ ಪ್ರೇರಿಸಲ್ಪಡುತ್ತಾರೆ. ಕೈಸರನ ನಿಯಮಗಳಿಗೆ ವಿಧೇಯರಾಗುವುದು, ನೈತಿಕವಾಗಿ ಶುದ್ಧವಾಗಿರುವ ಜೀವಿತವನ್ನು ನಡೆಸುವುದು ಅಥವಾ ಇತರರಿಗೆ ದಯಾಪೂರ್ಣ ಕೃತ್ಯಗಳನ್ನು ಮಾಡುವುದಷ್ಟೇ ಸಾಕು ಎಂದು ಅವರು ಯೋಚಿಸಬಹುದು. ಹೀಗಿದ್ದರೂ, ರಕ್ಷಣೆಯನ್ನು ಪಡೆದುಕೊಳ್ಳುವುದರ ಕುರಿತು ಬೈಬಲ್ ಏನನ್ನು ಹೇಳುತ್ತದೊ ಅದನ್ನು ಇತರರು ಕಲಿಯುವಂತೆ ಸಹಾಯಮಾಡುವ ಹಂಗುಳ್ಳವರಾಗಿದ್ದೇವೆಂಬ ಅನಿಸಿಕೆಯು ಅವರಿಗಿರುವುದಿಲ್ಲ. ಆದರೆ ನಾವು ಹೇಗೆ ಭಿನ್ನರಾಗಿದ್ದೇವೆ?
3 ನಮ್ಮ ಹುರುಪಿನ ಶುಶ್ರೂಷೆ ಮತ್ತು ಬೇರೆ ಧರ್ಮಗಳ ಚಟುವಟಿಕೆಗಳ ನಡುವೆ ತುಂಬ ವ್ಯತ್ಯಾಸವಿದೆ. ಆದಿ ಕ್ರೈಸ್ತರನ್ನು ಅನುಕರಿಸುತ್ತಾ, ಆಧುನಿಕ ದಿನದ ಸಾಕ್ಷಿಗಳು 100ಕ್ಕಿಂತಲೂ ಹೆಚ್ಚು ವರ್ಷಗಳಿಂದ ಭೂಲೋಕದ ಕಟ್ಟಕಡೆಯ ವರೆಗೆ ಸುವಾರ್ತೆಯನ್ನು ಶ್ರದ್ಧೆಯಿಂದ ಸಾರಿದ್ದಾರೆ. ನಾವು ಇದನ್ನು ಮಾಡುವ ಉದ್ದೇಶವು, ಸಾಧ್ಯವಿರುವಷ್ಟು ಹೆಚ್ಚು ಜನರು ತಮ್ಮ ಜೀವಿತಗಳನ್ನು ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ತರಲು ಸಹಾಯಮಾಡುವುದೇ ಆಗಿದೆ.—1 ತಿಮೋ. 2:4; 2 ಪೇತ್ರ 3:9.
4 ನಿಮಗೆ ಯಾವ ರೀತಿಯ ಖ್ಯಾತಿ ಇದೆ? ನೀವು ದೇವರ ವಾಕ್ಯವನ್ನು ಹುರುಪಿನಿಂದ ಸಾರುವ ವ್ಯಕ್ತಿಯಾಗಿದ್ದೀರಿ ಎಂಬ ಖ್ಯಾತಿ ನಿಮಗಿದೆಯೊ? (ಅ.ಕೃ. 17:2, 3; 18:25) ನಿಮ್ಮ ಸಾರುವ ಚಟುವಟಿಕೆಯಿಂದಾಗಿ, ನಿಮ್ಮ ನೆರೆಹೊರೆಯವರು ತಮ್ಮ ಧರ್ಮ ಮತ್ತು ನಿಮ್ಮ ಧರ್ಮದ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ನೋಡಬಲ್ಲರೋ? ನಿಮ್ಮ ನಿರೀಕ್ಷೆಯನ್ನು ಇತರರಿಗೆ ಹಂಚಿಕೊಳ್ಳಲು ಉತ್ಸುಕರಾಗಿರುವ ಒಬ್ಬ ವ್ಯಕ್ತಿಯಾಗಿದ್ದೀರೆಂಬ ಖ್ಯಾತಿ ನಿಮಗಿದೆಯೊ? ಶುಶ್ರೂಷೆಯಲ್ಲಿ ಭಾಗವಹಿಸಲು ನಿಮಗೆ ಒಂದು ನಿಯತಕ್ರಮವು ಇದೆಯೋ? ನಾವು ಕೇವಲ ನಮ್ಮ ಹೆಸರಿನ ಮೂಲಕ ಮಾತ್ರವಲ್ಲ, ಆ ಹೆಸರು ಏನನ್ನು ವರ್ಣಿಸುತ್ತದೊ, ಅಂದರೆ ಯೆಹೋವನ ಕುರಿತು ಸಾಕ್ಷಿಯನ್ನು ಕೊಡುವ ಮೂಲಕವೂ ನಾವು ಭಿನ್ನರಾಗಿದ್ದೇವೆಂಬುದನ್ನು ತೋರಿಸುತ್ತೇವೆ.—ಯೆಶಾ. 43:10.
5 ದೇವರ ಕಡೆಗೆ ಮತ್ತು ನೆರೆಯವರ ಕಡೆಗಿನ ಪ್ರೀತಿಯು ಸಾರುವ ಚಟುವಟಿಕೆಯಲ್ಲಿ ಒಳಗೂಡುವಂತೆ ನಮ್ಮನ್ನು ಪ್ರಚೋದಿಸುತ್ತದೆ. (ಮತ್ತಾ. 22:37-39) ಈ ಕಾರಣದಿಂದಲೇ, ಯೇಸು ಮತ್ತು ಅವನ ಅಪೊಸ್ತಲರಂತೆಯೇ, ರಾಜ್ಯದ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳಲಿಕ್ಕಾಗಿ ನಾವು ಪ್ರತಿಯೊಂದು ಅವಕಾಶವನ್ನು ವಿನಿಯೋಗಿಸಲು ಬಯಸುತ್ತೇವೆ. ಆಲಿಸಲು ಬಯಸುವವರೆಲ್ಲರಿಗೂ ರಾಜ್ಯದ ಸುವಾರ್ತೆಯನ್ನು ಹುರುಪಿನಿಂದ ಸಾರುವುದನ್ನು ನಾವು ಮುಂದುವರಿಸೋಣ. ಹೀಗೆ ಮಾಡುವಲ್ಲಿ, ಪ್ರಾಮಾಣಿಕ ಹೃದಯದ ಜನರು “ದೇವರನ್ನು ಸೇವಿಸುವವರಿಗೂ ಸೇವಿಸದವರಿಗೂ ಇರುವ ತಾರತಮ್ಯವನ್ನು . . . ಕಾಣು”ವರು.—ಮಲಾ. 3:18.