ಪ್ರಕಟಣೆಗಳು
ಸಾಹಿತ್ಯ ನೀಡುವಿಕೆ ಮಾರ್ಚ್ ಮತ್ತು ಏಪ್ರಿಲ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಪುನರ್ಭೇಟಿಗಳನ್ನು ಮಾಡುವಾಗ ಬೈಬಲ್ ಬೋಧಿಸುತ್ತದೆ ಪುಸ್ತಕ ಕೊಡಿ ಅಥವಾ ದೇವರ ಮಾತನ್ನು ಆಲಿಸಿ/ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಕಿರುಹೊತ್ತಗೆಗಳಲ್ಲಿ ಒಂದನ್ನು ಕೊಟ್ಟರೆ ಒಳಿತೆಂದು ಅನಿಸಿದರೆ ಅದನ್ನೇ ಕೊಡಿ. ಬೈಬಲ್‌ಅಧ್ಯಯನ ಆರಂಭಿಸಲು ಪ್ರಯತ್ನಿಸಿ. ಮೇ ಮತ್ತು ಜೂನ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಅಥವಾ ಕೆಳಕಂಡ ಕರಪತ್ರಗಳನ್ನು ಕೊಡಿ: ಜಹನ್ನುಮ್ ದೈವಿಕ ನ್ಯಾಯದ ಒಂದು ಭಾಗವೋ?, ಪರದೈಸಿಗೆ ಹೋಗುವ ದಾರಿಯನ್ನು ಕಂಡುಕೊಳ್ಳುವ ವಿಧ, ನಿಮ್ಮ ಜೀವನ ವಿಧಿವಶವೋ?, ಯೆಹೋವನು—ಯಾರು?, ಯೇಸು ಕ್ರಿಸ್ತ—ಯಾರು?, ಕಷ್ಟಾನುಭವವು ಎಂದಾದರೂ ಕೊನೆಗೊಳ್ಳುವುದೋ?, ಸರ್ವಶ್ರೇಷ್ಠ ಹೆಸರು, ಯೆಹೋವನ ಸಾಕ್ಷಿಗಳು ಯಾರು? ಮತ್ತು ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಮನೆಯವರಿಗೆ ಆಸಕ್ತಿಯಿರುವಲ್ಲಿ, ಬೈಬಲ್ ಬೋಧಿಸುತ್ತದೆ? ಪುಸ್ತಕದಿಂದ ಅಥವಾ ದೇವರ ಮಾತನ್ನು ಆಲಿಸಿ/ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಕಿರುಹೊತ್ತಗೆಗಳಲ್ಲಿ ಒಂದರಿಂದ ಬೈಬಲ್ ಅಧ್ಯಯನ ಮಾಡುವುದು ಹೇಗೆಂದು ತೋರಿಸಿಕೊಡಿ.
ಈ ವರ್ಷ ಸೋಮವಾರ ಏಪ್ರಿಲ್ 14, 2014ರಂದು ಕ್ರಿಸ್ತನ ಮರಣವನ್ನು ಸ್ಮರಿಸಲಿದ್ದೇವೆ. ನಿಮ್ಮ ಸಭೆಯಲ್ಲಿ ಸೋಮವಾರದಂದು ಕೂಟಗಳು ನಡೆಯುತ್ತಿದ್ದಲ್ಲಿ ಅದನ್ನು ಬೇರೆ ದಿನಕ್ಕೆ ಮುಂದೂಡಬೇಕಾಗುತ್ತದೆ. ಒಂದುವೇಳೆ ಆ ವಾರ ಸೇವಾ ಕೂಟವನ್ನು ನಡೆಸಲು ಆಗದಿದ್ದರೆ ನಿಮ್ಮ ಸಭೆಗೆ ಅನ್ವಯವಾಗುವ ಭಾಗಗಳನ್ನು ಮುಂದಿನ ವಾರಗಳಲ್ಲಿ ನಡೆಸಲು ಹಿರಿಯರ ಮಂಡಲಿಯ ಸಂಯೋಜಕನು ಏರ್ಪಾಡು ಮಾಡಬೇಕು.
2014ರ ಸೇವಾ ವರ್ಷದಲ್ಲಿ ಸರ್ಕಿಟ್ ಮೇಲ್ವಿಚಾರಕರ ಎರಡನೇ ಸುತ್ತಿನ ಭೇಟಿಯ ಸಾರ್ವಜನಿಕ ಉಪನ್ಯಾಸದ ಶೀರ್ಷಿಕೆ “ಲೋಕಸಂಕಟದಿಂದ ರಕ್ಷಣೆ.”
ಜೂನ್ 30, 2014ರ ವಾರದಿಂದ ಯೆಹೋವನ ಇಷ್ಟವನ್ನು ಯಾರು ಮಾಡುತ್ತಿದ್ದಾರೆ? ಎಂಬ ಕಿರುಹೊತ್ತಗೆಯನ್ನು ಸಭಾ ಬೈಬಲ್ ಅಧ್ಯಯನದಲ್ಲಿ ಪರಿಗಣಿಸಲಿದ್ದೇವೆ. ಈ ಕಿರುಹೊತ್ತಗೆಯ ನಂತರ, ಸೆಪ್ಟೆಂಬರ್ 8, 2014ರ ವಾರದಿಂದ ಬೈಬಲ್ ಕಥೆಗಳ ನನ್ನ ಪುಸ್ತಕವನ್ನು ಪರಿಗಣಿಸಲಿದ್ದೇವೆ. ಈ ಪ್ರಕಾಶನಗಳ ಸರಬರಾಯಿಗಾಗಿ ಸಭೆಗಳು ತಮ್ಮ ಮುಂದಿನ ಲಿಟರೇಚರ್ ಆರ್ಡರ್‌ನಲ್ಲಿ ವಿನಂತಿಸಬೇಕು.