ಬೇಸರವು ಒತ್ತಡ ಮತ್ತು ಖಿನ್ನತೆಯನ್ನು ತರಬಲ್ಲದು
“ಬೇಸರವು ಮಾನವನು ಅನುಭವಿಸುವ ಅತ್ಯಂತ ಜಜ್ಜುವ, ಪೀಡಕ ಒತ್ತಡಗಳಲ್ಲಿ ಒಂದಾಗಿದೆ.” ಹೀಗೆಂದು ಇಲ್ಲಿ ಪತ್ರಿಕೆಯ ಲೇಖನವೊಂದರಲ್ಲಿ ಓಕಾಹ್ಲೋಮದ ವಿಶ್ವವಿದ್ಯಾಲಯದ ಮನ:ಶಾಸ್ತ್ರ ಮತ್ತು ವರ್ತನಾ ವಿಜ್ಞಾನಗಳ ವಿಶ್ರಾಂತ ಮಹೋಪಾಧ್ಯಾಯ ಡಾ. ಜೈ ಶರ್ಲೇ ವರದಿಮಾಡುತ್ತಾರೆ. “ಬೇಸರ” ಅವರಂದದ್ದು, “ಅತೃಪ್ತಿಯ, ಬಹಳಷ್ಟು ಅಸಂತೋಷದ ಭಾವನೆಯಾಗಿದ್ದು ಏನೋ ಒಂದು ನಮ್ಮ ಜೀವಿತದಲ್ಲಿ ಸರಿಯಾಗಿಲ್ಲವೆಂದೇ. ನಮ್ಮ ಅಗತ್ಯತೆಗಳು ಪೂರೈಸಲ್ಪಟ್ಟಿಲ್ಲ ಎನ್ನುವುದರ ಸೂಚಕ, ಒಂದು ನಿರ್ದಿಷ್ಟ ತರದ ಪ್ರಚೋದನೆಗಾಗಿ ವಿನಂತಿ, ಏನೋ ಸಿಕ್ಕಿ ಬಿದ್ದಿದ್ದೇವೆ ಎಂಬ ಭಾವನೆಯಾಗಿರುತ್ತದೆ. ಇದು ಬಹಳ ಒತ್ತಡ ತರುವಂಥದ್ದು ಮತ್ತು ಅದು ವಿವಿಧ ಸಮಸ್ಯೆಗಳಿಗೆ—ಖಿನ್ನತೆಗೆ, ಮಾದಕೌಷಧದ ಬಳಕೆಗೆ, ನರವ್ಯೂಹಗಳ ರೋಗ, ಬೇಸರವನ್ನು ತಪ್ಪಿಸಿಕೊಳ್ಳಲು ಸರಳವಾದ ದಾರಿಯಾದ ತುಂಬಾ ನಿದ್ರಿಸುವಿಕೆಗೆ ನಡಿಸ ಸಾಧ್ಯವಿದೆ.”
ಬೇಸರದ ಕಾರಣಗಳು ಮತ್ತು ಪರಿಣಾಮದ ಮೇಲೆ ಡಾ. ಶರ್ಲೇಯವರ ಸಂಶೋಧನೆಯು ಅಂಟಾರ್ಕಟಿಕದ ಐದು ವರ್ಷದ ಯೋಜನೆಯ ಒಂದು ಭಾಗವಾಗಿರುತ್ತದೆ. ಅವರ ಬೆರಗುಗೊಳಿಸುವ ಅವಲೋಕನೆಗಳಲ್ಲಿ ಒಂದು ಏನಂದರೆ ಬೇಸರವು ವಿಷವರ್ತುಲವನ್ನೇ ಆರಂಭಿಸಬಲ್ಲದು. ವ್ಯಕ್ತಿಯೊಬ್ಬನಲ್ಲಿ ಮಹತ್ತಾದ ಒತ್ತಡವನ್ನು ಅದು ಹುಟ್ಟಿಸಬಲ್ಲದು. ಒತ್ತಡದ ಪರಿಣಾಮವಾಗಿ ಇನ್ನಷ್ಟು ಬೇಸರಕ್ಕೆ ಕಾರಣವಾಗಿ, ಅಂತರಿಕವಾಗಿ ಹೆಚ್ಚು ಒತ್ತಡವನ್ನು ಉತ್ಪಾದಿಸಬಲ್ಲದು.
ಈ ಬೇಸರ ವರ್ತುಲ ಪರಿಣಾಮಗಳು ಧ್ವಂಸಕಾರಿಯಾಗಬಹುದು. ಡಾ. ಶರ್ಲೇ ವಿವರಿಸುವುದು: “ಒಂದು ಕೆಲಸದಿಂದಾಗಿ ಬೇಸರ ಹುಟ್ಟಿಸಿ ಗಂಡನಿಂದ ಯಾ ಹೆಂಡತಿಯಿಂದ ಅನೇಕ ವಿಚ್ಛೇದನೆಗಳು ಆಗುತ್ತವೆ. ಮಕ್ಕಳು ಮನೆಬಿಟ್ಟು ಹೋದದರಿಂದ ಬೇಸರ, ಮಂದ ಸಾಮಾಜಿಕ ಜೀವನದಿಂದ ಬೇಸರ. ಆದರೆ ಸಮಸ್ಯೆಯು ಮೂಲತ: ವ್ಯಕ್ತಿಗತ ಎಂಬ ವಾಸ್ತವಾಂಶವನ್ನು ಎದುರಿಸ ಶಕ್ಯವಾಗದೆ ಇರುವಂಥವರದ್ದು ಯಾ ಎದುರಿಸದೇ ಇರುವವರದ್ದು.” ಆದುದರಿಂದ ಬೇಸರ ಹೊಂದಿದ ಸಂಗಾತಿಯು ವಿಚ್ಛೇದನೆ ಹೊಂದಿ, ಹೊಸಬನನ್ನು ಕಂಡುಕೊಂಡು, ಸಮಸ್ಯೆಯು ಕೊಂಚ ಅದು ಪರಿಹರಿಸುತ್ತದೆ. ಕೊಂಚ ಸಮಯವೇ. ಅನಂತರ ಅದು ಪುನ: ಮೊದಲ ಸ್ಥಾನಕ್ಕೆ ಬರುತ್ತದೆ.” ಹೌದು, ಬೇಸರವು ಆ ವ್ಯಕ್ತಿಯನ್ನು ಪುನ: ವಿಷಣ್ಣತೆಗೆ ಧುಮುಕಿಸುತ್ತದೆ.
ಡಾ. ಶರ್ಲೇ ಹೇಳಿದ್ದು, “ಮಾನವ ಮನಸ್ಸು ಬದಲಾವಣೆಗೆ, ಪಂಥಕ್ಕೆ, ಕಲಿಯುವಿಕೆಗೆ, ಮತ್ತು ಹೊಸ ಅನುಭವಕ್ಕೆ ಹಸಿದಿರುತ್ತದೆ. ವೈವಿಧ್ಯತೆಯು ಜೀವನದ ಮಸಾಲೆಯಲ್ಲ. ಅದು ಜೀವನದ ತಿರುಳಾಗಿದೆ.” ಈ ಸಂಬಂಧದಲ್ಲಿ ಡಾ. ಶರ್ಲೇ, ಶ್ರೀಮಂತರಿಗೆ ಬೇಸರದೊಂದಿಗೆ ಸಮಸ್ಯೆಯಿರಲು ವಿಶೇಷ ಕಾರಣವೇನೆಂದು ವಿವರಿಸಿದ್ದಾರೆ. “ಅವರು ಬಯಸಿದ್ದೆಲ್ಲವನ್ನು ಅವರು ಪಡೆಯ ಶಕ್ತರು. ನಿಜವಾಗಿ ಸಂತೃಪ್ತಿಯದ್ದಾಗಿ ಯಾವುದಾದರೂ ಇರಬೇಕಾದರೆ ಅದಕ್ಕಾಗಿ ದುಡಿಯಬೇಕು, ಅದು ದೊರೆಯುವ ತನಕ ದುಡಿಯಬೇಕು. ಯಾವುದೋ ಒಂದು ನಿಜವಾಗಿ ಪಂಥಾಹ್ವಾನವಾಗಿ ಇಲ್ಲದಿರುವಾಗ, ಸುಯೋಗದ ಅಸ್ತಿತ್ವ ಬೇಸರ ಬರಿಸುವಂಥಾದ್ದು—ಇಂತಹ ಪರಿಸ್ಥಿತಿಗಳಲ್ಲಿ ಮಾದಕೌಷಧದ ಬಳಕೆಗೆ ಅನೇಕ ಜನರು ತಿರುಗಲು ಇನ್ನೊಂದು ಕಾರಣ.” (g89 12/22)